
ಗಾಯಕ ವಿಜಯ್ ಪ್ರಕಾಶ್, ಪತ್ನಿ ಮಹತಿ
ಗಾಯಕ ವಿಜಯ್ ಪ್ರಕಾಶ್ ಹಾಗೂ ಪತ್ನಿ ಮಹತಿ ಅವರು 25ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.
ವಿಜಯ್ ಪ್ರಕಾಶ್ ದಂಪತಿಗೆ ಶುಭಕೋರಿರುವ 'ವಿಪಿ ಕಲ್ಚರಲ್ ಕ್ಲಬ್' ತಂಡವು, ‘ಒಟ್ಟಾಗಿ ಕಂಡ ಕನಸುಗಳು, ಮೌನದಲ್ಲೂ ಕಾಣಿಸಿದ ಶಕ್ತಿ, ಕಾಲದೊಂದಿಗೆ ಇನ್ನಷ್ಟು ಆಳಗೊಂಡಿದೆ ಬಂಧ. ನಿಮ್ಮ ಮುಂದಿನ ದಿನಗಳು ಇನ್ನಷ್ಟು ಸಂಗೀತ, ನಗುವಿನಿಂದ ಕೂಡಿರಲಿ. ಇನ್ನೂ ಅನೇಕ ಮೈಲಿಗಲ್ಲುಗಳನ್ನು ಸಾಧಿಸುವ ಅವಕಾಶ ದೊರೆಯಲಿ’ ಎಂದು ಬರೆದು ಶುಭಹಾರೈಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಚಿತ್ರಗಳಲ್ಲಿ, ‘ವಿಜಯ್ ಪ್ರಕಾಶ್ ಹಾಗೂ ಪತ್ನಿ ಮಹತಿ ಅವರು ಹಾರ ಬದಲಾಯಿಸಿಕೊಂಡು, ಕೇಕ್ ಕತ್ತರಿಸುವ ಮೂಲಕ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿರುವುದನ್ನು ಕಾಣಬಹುದು.
ಬಾಲ್ಯ ಸ್ನೇಹಿತೆ ಮಹಿತಿಯನ್ನು ವಿಜಯ್ ಪ್ರಕಾಶ್ 2001ರಲ್ಲಿ ವಿವಾಹವಾದರು. ಈ ದಂಪತಿಗೆ ಒಬ್ಬಳು ಮಗಳು ಇದ್ದಾಳೆ.
ಗಾಯಕ ವಿಜಯ್ ಪ್ರಕಾಶ್ ಅವರು 'ಹಲೋ ಹಲೋ.. ನನ್ನ ಮನಸ್ಸು ಇಲ್ಲೆ ಎಲ್ಲೋ...', 'ಓಪನ್ ಹೇರ್ ಬಿಟ್ಕೊಂಡು', ಕಾಂತಾರ ಚಿತ್ರದ 'ಸಿಂಗಾರ ಸಿರಿಯೇ..', ಕಿರಿಕ್ ಪಾರ್ಟಿ ಚಿತ್ರದ 'ಬೆಳಗೆದ್ದು ಯಾರ ಮುಖವ ನಾನು ನೋಡಿದೆ', 'ಓಂ ಶಿವೋಹಂ' ಸೇರಿ ಕನ್ನಡದ ಹಿಟ್ ಹಾಡುಗಳಿಗೆ ಧ್ವನಿ ನೀಡಿದ್ದಾರೆ.
‘ಕನ್ನಡ, ಹಿಂದಿ, ತಮಿಳು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ವಿಜಯ್ ಪ್ರಕಾಶ್ ಅವರ ಹಾಡುಗಳು ಕೇಳುಗರ ಮನಗೆದ್ದಿವೆ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿರುತ್ತಾರೆ. ಇದಲ್ಲದೇ ತಮಿಳು , ಕನ್ನಡ ಸರಿಗಮಪ ರಿಯಾಲಿಟಿ ಶೋ ಜಡ್ಜ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.