ADVERTISEMENT

ಟೀಸರ್‌ನಲ್ಲೇ ‘ಧೂಳೆಬ್ಬಿಸಿದ್ದ ‘ಸೀತಾ ರಾಮಂ‘: ದುಲ್ಕರ್, ರಶ್ಮಿಕಾ ಲವ್ ಕಹಾನಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 6:04 IST
Last Updated 27 ಜೂನ್ 2022, 6:04 IST
ಪೋಸ್ಟರ್‌
ಪೋಸ್ಟರ್‌   

ಮಲಯಾಳಂ ಖ್ಯಾತ ನಟದುಲ್ಕರ್ ಸಲ್ಮಾನ್ ಅಭಿನಯದ ‘ಸೀತಾ ರಾಮಂ‘ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ.

ಟಾಲಿವುಡ್ ಪ್ರೊಡಕ್ಷನ್ ಹೌಸ್‌ನ ವೈಜಯಂತಿ ಮೂವೀಸ್‌ನ ಬಹು ನಿರೀಕ್ಷಿತ ರೊಮ್ಯಾಂಟಿಕ್‌ ಹಾಗೂ ಸಾಹಸ ಇರುವ 'ಸೀತಾ ರಾಮಂ' ಚಿತ್ರವನ್ನು ಹನು ರಾಘವಪುಡಿ ನಿರ್ದೇಶನ ಮಾಡುತ್ತಿದ್ದಾರೆ.ದುಲ್ಕರ್ ಸಲ್ಮಾನ್ ಅವರಿಗೆ ಜೋಡಿಯಾಗಿ ಮೃಣಾಲ್ ಠಾಕೂರ್, ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.

ಟೀಸರ್‌ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ. ಯೋಧನ ಪಾತ್ರದಲ್ಲಿ ಕಾಣಿಸಿಕೊಂಡಿರುವ ದುಲ್ಕರ್‌ ಸಲ್ಮಾನ್‌ಕಾಶ್ಮೀರ ಕಣಿವೆಯಲ್ಲಿ ಗಸ್ತು ತಿರುಗುತ್ತಿರುತ್ತಾರೆ. ಅವಿವಾಹಿತರಾದಅವರಿಗೆ ಒಂದು ದಿನ ಹೆಂಡತಿ ಎಂದು ಹೇಳಿಕೊಳ್ಳುವ ಸೀತಾ ಮಹಾಲಕ್ಷ್ಮಿಪತ್ರ ಬರೆಯುತ್ತಾರೆ. ಮುಂದೆ ಏನಾಗುತ್ತದೆ ಎಂಬುದು ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿಸಿದೆ.

ADVERTISEMENT

ಸೀತಾ ರಾಮಂ ಚಿತ್ರ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗುತ್ತಿದೆ. ಈ ಸಿನಿಮಾ ಆಗಸ್ಟ್ 5 ರಂದು ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.