ADVERTISEMENT

ಕಾರ್ಯಕ್ರಮಕ್ಕೆ ಬಂದು ಪೋಷಕರಿಂದ ತಪ್ಪಿಸಿಕೊಂಡಿದ್ದ ಬಾಲಕನಿಗೆ ನೆರವಾದ ಸೋನು ನಿಗಮ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಫೆಬ್ರುವರಿ 2026, 9:35 IST
Last Updated 10 ಫೆಬ್ರುವರಿ 2026, 9:35 IST
<div class="paragraphs"><p>ಸೋನು ನಿಗಮ್</p></div>

ಸೋನು ನಿಗಮ್

   

ಚಿತ್ರ ಕೃಪೆ: ಇನ್‌ಸ್ಟಾಗ್ರಾಂ

ಸೋನು ನಿಗಮ್ ಪ್ರಸ್ತುತ ಸಂಗೀತ ಕಾರ್ಯಕ್ರಮ ಸರಣಿಯೊಂದಿಗೆ ದೇಶದಾದ್ಯಂತ ಹಲವು ನಗರಗಳಿಗೆ ಭೇಟಿ ನೀಡುತ್ತಿದ್ದಾರೆ.

ADVERTISEMENT

ಸೋಮವಾರ ಹುಬ್ಬಳ್ಳಿಯಲ್ಲಿ ನಡೆದ ಕ್ರಾರ್ಯಕ್ರಮದಲ್ಲಿ ಬಾಲಕನೊಬ್ಬ ತನ್ನ ಪೋಷಕರಿಂದ ತಪ್ಪಿಸಿಕೊಂಡಿದ್ದನು. ಆಗ ಸೋನ್‌ ನಿಗಮ್‌ ಬಾಲಕನಿಗೆ ಪೋಷಕರನ್ನು ಹುಡುಕಲು ಸಹಾಯ ಮಾಡಿದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಈ ವಿಡಿಯೊವನ್ನು ಸೋನು ನಿಗಮ್ ಅವರು ತಮ್ಮ ಇನ್‌ಸ್ಟಾಗ್ರಾಂ  ಖಾತೆಯಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  

ಈ ಕಾರ್ಯಕ್ರಮದಲ್ಲಿ 30 ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಶ್ರೀ ಸಾಯಿ ಎಂಬ ಯುವಕ ಕಾರ್ಯಕ್ರಮಕ್ಕೆ ಬರುತ್ತಿದ್ದ ವೇಳೆ ತನ್ನ ಕುಟುಂಬದಿಂದ ಬೇರ್ಪಟ್ಟಿದ್ದ. ಇದನ್ನು ಗಮನಿಸಿದ ಸೋನು ನಿಗಮ್‌ ಬಾಲಕನನ್ನು ಸಮಾಧಾನ ಮಾಡುತ್ತ ವೇದಿಕೆಯ ಮುಂಭಾಗಕ್ಕೆ ಕರೆದುಕೊಂಡು ಬಂದರು. ನಂತರ ಬಾಲಕನಿಗಾಗಿ ಒಂದು ಹಾಡನ್ನೂ ಹಾಡಿದ್ದಾರೆ. ಜತೆಗೆ ಬಾಲಕನೊಂದಿಗೆ ಲಘು ನೃತ್ಯವನ್ನು ಮಾಡಿದ್ದಾರೆ.

ಶ್ರೀ ಸಾಯಿ ಆ ಜಾವೋ, ಮಮ್ಮಿ ಪಾಪಾ ಇಸ್ಕೋ ಲೇ ಜಾವೋ... ಇಸ್ಕೆ ಮಮ್ಮಿ ಪಾಪಾ ಖೋ ಗಯೇ, ಜಲ್ದಿ ಆಕೇ ಇಸ್ಕೋ ಲೇ ಜಾವೋ’ ಎಂದು ಸೋನು ನಿಗಮ್ ಹಾಡಿದ್ದಾರೆ.

‘ಹುಬ್ಬಳ್ಳಿಯಲ್ಲಿ 30,000 ಜನರ ಗುಂಪಿನಲ್ಲಿ ಶ್ರೀ ಸಾಯಿ ಪೋಷಕರಿಂದ ತಪ್ಪಿಸಿಕೊಂಡು ಭಯಗೊಂಡಿದ್ದ. ನನ್ನನ್ನು ಕಂಡ ನಂತರ ಅವನಿಗೆ ಭಯ ಹೋಯಿತು. ಮತ್ತೆ ಅವನು ಕಳೆದುಹೋಗಿಲ್ಲ ಎಂದು ಭಾವಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ನಂತರ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಿದ್ದ ತಂಡವು ಮಗುವಿನ ಚಿಕ್ಕಪ್ಪನನ್ನು ಹುಡುಕಿ ಬಾಲಕನನ್ನು ಅವರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ. ಫೆಬ್ರುವರಿ 14ರಂದು ಲಖನೌನಲ್ಲಿ ಮುಂದಿನ ಕಾರ್ಯಕ್ರಮ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.