ADVERTISEMENT

ಜನ್ಮದಿನದ ಸಂಭ್ರಮದಲ್ಲಿರುವ ನಟ ಶ್ರೀಮುರಳಿಗೆ ಡಬಲ್ ಧಮಾಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಡಿಸೆಂಬರ್ 2025, 5:55 IST
Last Updated 17 ಡಿಸೆಂಬರ್ 2025, 5:55 IST
<div class="paragraphs"><p>ಶ್ರೀಮುರಳಿ</p></div>

ಶ್ರೀಮುರಳಿ

   

ಕನ್ನಡ ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರಾಗಿರುವ ಶ್ರೀಮುರಳಿ ಅವರು ಇಂದು (ಡಿಸೆಂಬರ್ 17) ಎರಡೆರಡು ಸಂಭ್ರಮದಲ್ಲಿದ್ದಾರೆ. ಮೊದಲನೆಯದು ಇಂದು ಶ್ರೀಮುರಳಿ ಅವರ ಜನುಮ ದಿನ. ಇನ್ನೊಂದು ‘ಬಘೀರ’ ಚಿತ್ರದ ಬಳಿಕ ಮುಂದಿನ ಸಿನಿಮಾದ ಪೋಸ್ಟರ್‌ ಅನ್ನು ಸಹ ಬಿಡುಗಡೆ ಮಾಡಿದ್ದಾರೆ.

ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ತಮ್ಮ ಮುಂದಿನ ಸಿನಿಮಾದ ಪೋಸ್ಟರ್‌ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇಂದು ಉಗ್ರಾಯುಧಮ್ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಿಕೆ ಮಾಡಲಾಗಿದೆ. ಈ ಬಗ್ಗೆ ಖುದ್ದು ನಟ ಮಾಹಿತಿ ನೀಡಿದ್ದಾರೆ.

ADVERTISEMENT

ಅದರ ಜೊತೆಗೆ ಹೊಸ ಪೋಸ್ಟರ್ ಜೊತೆಗೆ ‘ನನ್ನ ಪ್ರೀತಿಯ ಅಭಿಮಾನಿ ದೇವರುಗಳೇ ನಾಳೆ ನಮ್ಮ ಮನೆಯಲ್ಲಿ 10 ಗಂಟೆಯಿಂದ ನಿಮಗೆ ನಾನು ಸಿಗುತ್ತೇನೆ. ದಯವಿಟ್ಟು ನನಗೆ ಏನೂ ತರಬೇಡಿ, ಬದಲಿಗೆ ಬೇಕಿರುವವರಿಗೆ ಧಾನ ಮಾಡಿ, ನನಗೆ ನಿಮ್ಮ ಹೃದಯದಲ್ಲಿ ಕೊಟ್ಟಿರುವ ಪ್ರೀತಿಯೆ ಸಾಕು. ಸಿಗುವ ಬನ್ನಿ’ ಎಂದು ಸಂದೇಶ ನೀಡಿದ್ದಾರೆ.

ಶ್ರೀಮುರಳಿ

ಇನ್ನು, ನಟ ಶ್ರೀಮುರಳಿ ಅವರ ಮುಂದಿನ ಸಿನಿಮಾದ ಹೆಸರು ‘ಉಗ್ರಾಯುಧಮ್’. ಜಯರಾಮ್ ದೇವಸಮುದ್ರ ನಿರ್ಮಾಣದಲ್ಲಿ ಹಾಗೂ ಪುನೀತ್ ರುದ್ರನಾಗ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಉಗ್ರಾಯುಧಮ್’ ಸಿನಿಮಾದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ನಾಯಕರಾಗಿ ನಟಿಸಲು ಸಜ್ಜಾಗಿದ್ದಾರೆ. ಮುಂದಿನ ತಿಂಗಳು ಈ ಚಿತ್ರದ ಶೂಟಿಂಗ್ ಶುರುವಾಗಲಿದ್ದು, 135 ಎಕರೆ ಜಾಗದಲ್ಲಿ ಸೆಟ್ ಕೂಡ ಹಾಕಲಾಗುತ್ತಿದೆ. 700 ವರ್ಷದ ಹಿಂದಿನ ಐತಿಹಾಸಿಕ ಸಿನಿಮಾ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.