
ಶ್ರೀನಿಧಿ ಶೆಟ್ಟಿ, ತಮನ್ನಾ ಭಾಟಿಯಾ
ಚಿತ್ರ: ಇನ್‌ಸ್ಟಾಗ್ರಾಂ
ಮಹಾ ಶಿವರಾತ್ರಿಯ ದಿನದಂದು ಇಶಾ ಫೌಂಡೇಶನ್‌ಗೆ ಭಕ್ತ ಸಾಗರವೇ ಹರಿದು ಬಂದಿತ್ತು. ಪ್ರತಿ ವರ್ಷದಂತೆ ಈ ವರ್ಷ ಕೂಡ ಮಹಾ ಶಿವರಾತ್ರಿಯಂದು ಸಂಗೀತ, ನೃತ್ಯ ಇನ್ನಿತರ ಕಾರ್ಯಕ್ರಮಗಳು ಜರುಗಿದ್ದವು. ವಿಶೇಷವಾಗಿ ಮಹಾ ಶಿವರಾತ್ರಿಯಂದು ಇಶಾ ಫೌಂಡೇಶನ್ನಲ್ಲಿ 'ಕೆಜಿಎಫ್' ಚೆಲುವೆ ಶ್ರೀನಿಧಿ ಶೆಟ್ಟಿ ಹಾಗೂ ನಟಿ ತಮನ್ನಾ ಭಾಟಿಯ ಭಾಗಿಯಾಗಿದ್ದರು.
ತಮನ್ನಾ ಭಾಟಿಯಾ
ಇದೇ ವೇಳೆ ಶಿವರಾತ್ರಿಯಂದು ಶಿವನ ಮುಂದೆ ಶ್ರೀನಿಧಿ ಶೆಟ್ಟಿ ಹಾಗೂ ತಮನ್ನಾ ಭಾಟಿಯಾ ಹೆಜ್ಜೆ ಹಾಕಿದ್ದಾರೆ. ಇದೇ ವಿಡಿಯೊವನ್ನು ನಟಿ ತಮನ್ನಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅವರ ಜೊತೆಗೆ ಶ್ರೀನಿಧಿ ಶೆಟ್ಟಿ ಕೂಡ ಭಾಗಿಯಾಗಿ ಶಿವನ ಆರಾಧನೆ ಮಾಡಿದ್ದಾರೆ.
ಶ್ರೀನಿಧಿ ಶೆಟ್ಟಿ, ತಮನ್ನಾ ಭಾಟಿಯಾ
ನಟಿ ಶ್ರೀನಿಧಿ ಶೆಟ್ಟಿ ಅವರು ಆಗಾಗ್ಗೆ ಇಶಾ ಫೌಂಡೇಶನ್‌ಗೆ ಭೇಟಿ ನೀಡುತ್ತಲೇ ಇರುತ್ತಾರೆ. ಶಿವನ ಧ್ಯಾನವನ್ನು ಮಾಡುತ್ತಾ ಕಣ್ಣೀರಿಟ್ಟ ಫೋಟೊಗಳು, ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ವಿಶೇಷ ಏನೆಂದರೆ ಈ ಬಾರಿ ಜನಪ್ರಿಯ ನಟಿಯರು ಶಿವನ ಆರಾಧನೆ ಮಾಡುತ್ತಾ ಡ್ಯಾನ್ಸ್ ಮಾಡಿದ್ದು, ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.