ADVERTISEMENT

ಮತ್ತೊಂದು ಹಾಟ್ ವಿಡಿಯೊ ವೈರಲ್‌: ಬಿಸಿಲಿಗೆ ನಶೆ ಏರಿಸಿದ ಸನ್ನಿ ಲಿಯೋನ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜನವರಿ 2022, 12:55 IST
Last Updated 14 ಜನವರಿ 2022, 12:55 IST
ಸನ್ನಿ ಲಿಯೋನ್‌ (ಇನ್‌ಸ್ಟಾಗ್ರಾಂ ಚಿತ್ರ)
ಸನ್ನಿ ಲಿಯೋನ್‌ (ಇನ್‌ಸ್ಟಾಗ್ರಾಂ ಚಿತ್ರ)   

ನವದೆಹಲಿ: ಇಂಟರ್ನೆಟ್‌ನಲ್ಲಿ ತಮ್ಮ ಮಾದಕ ಭಂಗಿಗಳ ಮೂಲಕ ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ನೋಡುಗರ ಎದೆಯಲ್ಲಿ ಕಿಚ್ಚು ಹಚ್ಚುವ ಕಲೆಯನ್ನು ಚೆನ್ನಾಗಿಯೇ ಕರಗತ ಮಾಡಿಕೊಂಡಿದ್ದಾರೆ. ಶುಕ್ರವಾರ ಸನ್ನಿ ಲಿಯೋನ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೊ ಇದಕ್ಕೆ ಹೊಸ ಉದಾಹರಣೆ.

ಸದ್ಯ ಮಾಲ್ಡೀವ್ಸ್ ಪ್ರವಾಸದಲ್ಲಿರುವ ಸನ್ನಿ, ಅಲ್ಲಿನ ಬೀಚ್‌ನಲ್ಲಿ ಸಮಯ ಕಳೆದ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ‘ನನ್ನ ದಿನದ ಪ್ರತಿ ನಿಮಿಷವನ್ನು ಪ್ರೀತಿಸುತ್ತೇನೆ!!’ ಎಂದು ಬರೆದುಕೊಂಡಿದ್ದಾರೆ.

ಕೆಂಪು ಬಣ್ಣದ ಬಿಕಿನಿ ಧರಿಸಿ ಸನ್ನಿ ಕೊಟ್ಟಿರುವ ಭಾವಭಂಗಿಗಳು ನೋಡುಗರನ್ನು ಕ್ಷಣಕಾಲ ಹಿಡಿದು ನಿಲ್ಲಿಸುವಂತಿವೆ. ಸದ್ಯ ಈ ವಿಡಿಯೊ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.