ADVERTISEMENT

ನಟಿ ತಮನ್ನಾ ಅಮ್ಮ–ಅಪ್ಪನಿಗೆ ಕೋವಿಡ್‌–19 ಸೋಂಕು ದೃಢ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 10:36 IST
Last Updated 26 ಆಗಸ್ಟ್ 2020, 10:36 IST
ಅಮ್ಮ ಮತ್ತು ಅಪ್ಪನ ಜೊತೆಗೆ ನಟಿ ತಮನ್ನಾ ಭಾಟಿಯಾ
ಅಮ್ಮ ಮತ್ತು ಅಪ್ಪನ ಜೊತೆಗೆ ನಟಿ ತಮನ್ನಾ ಭಾಟಿಯಾ   

ನಟಿ ತಮನ್ನಾ ಭಾಟಿಯಾ ಅವರ ತಂದೆ ಮತ್ತು ತಾಯಿಗೆ ಕೋವಿಡ್‌–19 ಸೋಂಕು ಇರುವುದು ದೃಢಪಟ್ಟಿದೆ. ತಮನ್ನಾ ಅವರೇಈ ಕುರಿತು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

‘ಅಪ್ಪ ಸಂತೋಷ್‌ ಭಾಟಿಯಾ ಮತ್ತು ಅಮ್ಮ ರಜನಿ ಭಾಟಿಯಾಗೆ ಕೋವಿಡ್‌ ಇರುವುದು ದೃಢಪಟ್ಟಿದೆ. ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ನನ್ನ ಪೋಷಕರು ಚೇತರಿಸಿಕೊಳ್ಳುವಂತೆ ದೇವರಲ್ಲಿ ಅಭಿಮಾನಿಗಳು ಪ್ರಾರ್ಥಿಸಿ’ ಎಂದು ಅವರು ಕೋರಿದ್ದಾರೆ.

ತಮನ್ನಾ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಮಾಹಿತಿ ಇಂತಿದೆ: ‘ಕಳೆದ ವಾರಾಂತ್ಯದಲ್ಲಿ ನನ್ನಪ್ಪ, ಅಮ್ಮನಿಗೆ ಕೋವಿಡ್‌ ಲಕ್ಷಣಗಳು ಸಣ್ಣದಾಗಿ ಗೋಚರಿಸಿದ್ದವು. ಮುಂಜಾಗ್ರತೆಯಾಗಿ ಅವರನ್ನು ವೈದ್ಯಕೀಯ ತಪಾಸಣೆ ಒಳಪಡಿಸಲಾಯಿತು. ಅವರಿಗೆ ಕೋವಿಡ್‌ ಸೋಂಕು ತಗುಲಿರುವುದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ನಾನು ಸೇರಿದಂತೆ ಕುಟುಂಬದ ಉಳಿದ ಸದಸ್ಯರು, ಮನೆ ಕೆಲಸದ ಸಿಬ್ಬಂದಿಗೆ ಕೋವಿಡ್‌ ನೆಗೆಟಿವ್‌ ಬಂದಿದೆ. ದೇವರ ಅನುಗ್ರಹದಿಂದ ಅಪ್ಪ, ಅಮ್ಮ ಕೂಡ ಇದರಿಂದ ಚೇತರಿಸಿಕೊಳ್ಳಲಿದ್ದಾರೆ. ಅಭಿಮಾನಿಗಳ ಪ್ರಾರ್ಥನೆಯು ಅವರು ಚೇತರಿಕೆಯ ಹಾದಿಗೆ ಮರಳಲು ನೆರವಾಗಲಿದೆ’ ಎಂದಿದ್ದಾರೆ ತಮನ್ನಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.