ADVERTISEMENT

ಒಟಿಟಿ ವೇದಿಕೆಗೆ ‘ತೀರ್ಥರೂಪ ತಂದೆಯವರಿಗೆ’; ಸ್ಟ್ರೀಮಿಂಗ್ ಎಲ್ಲಿ, ಯಾವಾಗ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಫೆಬ್ರುವರಿ 2026, 12:44 IST
Last Updated 26 ಫೆಬ್ರುವರಿ 2026, 12:44 IST
<div class="paragraphs"><p>ತೀರ್ಥರೂಪ ತಂದೆಯವರಿಗೆ ಸಿನಿಮಾ ಪೋಸ್ಟರ್</p></div>

ತೀರ್ಥರೂಪ ತಂದೆಯವರಿಗೆ ಸಿನಿಮಾ ಪೋಸ್ಟರ್

   

ಜನವರಿ 2ರಂದು ಬಿಡುಗಡೆಯಾಗಿದ್ದ ‘ತೀರ್ಥರೂಪ ತಂದೆಯವರಿಗೆ’ ಸಿನಿಮಾ ಒಟಿಟಿ ವೇದಿಕೆಗೆ ಆಗಮಿಸಿದೆ. ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ‘ತೀರ್ಥರೂಪ ತಂದೆಯವರಿಗೆ’  ಚಿತ್ರವನ್ನು ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನ ಮಾಡಿದ್ದರು.

ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದ ಬಳಿಕ, ಸಿನಿಮಾವು ಅಮೆಜಾನ್ ಪ್ರೈಮ್‌ ಒಟಿಟಿಗೆ ಲಗ್ಗೆ ಇಟ್ಟಿದೆ. ಈ ಸಿನಿಮಾದ ಸ್ಟ್ರೀಮಿಂಗ್ ಕುರಿತು ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಅವರು ಸಾಮಾಜಿಕ ಮಧ್ಯಮದ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ADVERTISEMENT

‘ತೀರ್ಥರೂಪ ತಂದೆಯವರಿಗೆ ಇಂದು ರಾತ್ರಿ 12:01ಕ್ಕೆ (ಫೆಬ್ರುವರಿ 27) ಅಮೆಜಾನ್ ಪ್ರೈಮ್‌ನಲ್ಲಿ ಪ್ರಥಮ ಪ್ರದರ್ಶನ ನೀಡಲಿದೆ. ವೀಕ್ಷಿಸಿ ಮತ್ತು ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ‌. ದಯವಿಟ್ಟು ಬೆಂಬಲಿಸಿ’ ಎಂದು ಪೋಸ್ಟರ್ ಜೊತೆಗೆ ಬರೆದುಕೊಂಡಿದ್ದಾರೆ

ಯಾವುದೋ ಕಾರಣದಿಂದ ತಂದೆಯಿಂದ ದೂರವಾದ ಮಗನೊಬ್ಬ ಮತ್ತೆ ತಂದೆಯನ್ನು ಹುಡುಕಿಕೊಂಡು ಹೋಗುವುದೇ ಚಿತ್ರದ ಕಥೆ. ಈ ಚಿತ್ರದಲ್ಲಿ ತಾಯಿಯ ಪಾತ್ರದಲ್ಲಿ ಸಿತಾರ, ವಿಶ್ವನಾಥನಾಗಿ ರಾಜೇಶ್ ನಟರಂಗ, ಪೃಥ್ವಿಯಾಗಿ ನಿಹಾರ್ ಮುಖೇಶ್‌, ಅಕ್ಷರಳಾಗಿ ರಚನಾ ಇಂದರ್ ನಟಿಸಿದ್ದಾರೆ. ದಶಕಗಳ ಕಾಲ ಹೀರೊಯಿನ್ ಆಗಿ ಮಿಂಚಿರುವ ಸಿತಾರ ಅವರು ಇತ್ತಿಚೀನ ದಿನಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ.

'ಹಾಲುಂಡ ತವರು' ಚಿತ್ರದ ಮೂಲಕ ಕನ್ನಡದ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಇವರು, ಬಳಿಕ ಚಿರಂಜೀವಿ ಸರ್ಜಾ ಅವರ 'ಅಮ್ಮ ಐ ಲವ್ ಯು' ಹಾಗೂ ಪುನೀತ್ ರಾಜಕುಮಾರ್ ನಟನೆ ‘ಚಕ್ರವ್ಯೂಹ’ ಚಿತ್ರದಲ್ಲಿ ನಟಿಸಿದ್ದರು. ದಕ್ಷಿಣ ಭಾರತದ ಎಲ್ಲಾ ಭಾಷೆಯ ಸಿನಿಮಾಗಳಲ್ಲೂ ನಟಿಸಿರುವ ಸಿತಾರಾ ಅವರು ಈ ಚಿತ್ರದಲ್ಲಿ ನಟಿಸಿರುವುದು ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.