ADVERTISEMENT

ವಿಡಿಯೊ: 'ಪವಿತ್ರಾ' ಬಂಧನಕ್ಕೆ ಸಿದ್ಧರಾದ ತೆಲುಗು ನಟ ನರೇಶ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಡಿಸೆಂಬರ್ 2022, 9:39 IST
Last Updated 31 ಡಿಸೆಂಬರ್ 2022, 9:39 IST
ನರೇಶ್, ಪವಿತ್ರಾ ಲೋಕೇಶ್‌
ನರೇಶ್, ಪವಿತ್ರಾ ಲೋಕೇಶ್‌   

ಹೈದರಾಬಾದ್‌: ತೆಲುಗುನಟ ನರೇಶ್ ಟ್ವಿಟರ್ ಮೂಲಕ ವಿಶೇಷ ವಿಡಿಯೊ ಬಿಡುಗಡೆ ಮಾಡಿದ್ದು, ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಶುಭಾಶಯ ಕೋರುವುದರ ಮೂಲಕ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.

ವಿಡಿಯೊವನ್ನು ಬಿಡುಗಡೆ ಮಾಡಿರುವ ನರೇಶ್‌ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಹಾಗೇ ನಟಿ ಪವಿತ್ರಾ ಲೋಕೇಶ್‌ ಜೊತೆ ಇರುವ ವಿಡಿಯೊ ಹಂಚಿಕೊಂಡಿದ್ದಾರೆ.

ವಿಡಿಯೊದಲ್ಲಿ ಹೊಸ ವರ್ಷಕ್ಕೆಪವಿತ್ರಾ ಜೊತೆಯಲ್ಲಿ ಕೇಕ್‌ ಕತ್ತರಿಸಿರುವ ನರೇಶ್ ಹೊಸ ವರ್ಷಕ್ಕೆ ಪವಿತ್ರಾ ಅವರನ್ನು ಮದುವೆಯಾಗುವುದಾಗಿ ಹೇಳಿದ್ದಾರೆ. ಈ ಹೊಸ ವರುಷದಲ್ಲಿ ನಿಮಗೂ ನಮ್ಮ ಲೋಕಕ್ಕೆ ಆಹ್ವಾನ ಎಂದು ಹೇಳಿದ್ದಾರೆ. ಈ ಮೂಲಕ ಮದುವೆಗೆ ಅಭಿಮಾನಿಗಳನ್ನು ಆಹ್ವಾನಿಸಿದ್ದಾರೆ.

ನಾನು ಶೀಘ್ರದಲ್ಲೇ ಮದುವೆಯಾಗಲಿದ್ದಾನೆ. ಅಭಿಮಾನಿಗಳು, ಹಿತೈಷಿಗಳು, ಗೆಳೆಯರು, ಸಿನಿಮಾರಂಗದವರು ಸೇರಿದಂತೆ ಎಲ್ಲರಆಶೀರ್ವಾದ ಬೇಕು ಎಂದು ಕೋರಿದ್ದಾರೆ. ಪವಿತ್ರಾ ಮತ್ತು ನರೇಶ್ ಈ ವರ್ಷದ ಕೊನೆ ದಿನ ವಿಡಿಯೊ ಬಿಡುಗಡೆ ಮಾಡಿದ್ದು, ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

ಕಳೆದ ಜುಲೈನಲ್ಲಿನಟಿ ಪವಿತ್ರಾ ಲೋಕೇಶ್ ತಮ್ಮ ಪತಿ, ತೆಲುಗು ನರೇಶ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ’ ಎಂದು ಆರೋಪಿಸಿ ರಮ್ಯಾ ರಘುಪತಿ (ನರೇಶ್‌ ಹೆಂಡತಿ) ಎಂಬುವರು ಮೈಸೂರಿನಲ್ಲಿ ನರೇಶ್–ಪವಿತ್ರಾ ಲೋಕೇಶ್‌ ತಂಗಿದ್ದ ಹೋಟೆಲ್‌ಗೆ ತೆರಳಿ ಅವರನ್ನು ಚಪ್ಪಲಿಯಿಂದ ಹೊಡೆಯಲು ಯತ್ನಿಸಿದ ಘಟನೆ ನಡೆದಿತ್ತು.

ನರೇಶ್‌ ಹಾಗೂ ಪವಿತಾ ಅವರು ಸದ್ಯರಿಲೇಶನ್‌ಶೀಫ್‌ನಲ್ಲಿದ್ದಾರೆ. ಇವರ ಸಂಬಂಧಕ್ಕೆ ನರೇಶ್ ಪತ್ನಿ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ತೆಲುಗು ಚಿತ್ರರಂಗದ ಕೆಲವರು ಅವರ ಸಂಬಂಧಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ನರೇಶ್‌ ರಮ್ಯಾ ಅವರಿಗೆಡಿವೋರ್ಸ್ ನೋಟಿಸ್‌ ಕಳುಹಿಸಿದ್ದಾರೆ ಎನ್ನಲಾಗಿದೆ. ಇದು ಇತ್ಯಾರ್ಥವಾದ ಬಳಿಕವಷ್ಟೆ ನರೇಶ್‌–ಪವಿತ್ರಾ ಮದುವೆಯಾಗುತ್ತಾರೆ ಎಂಬ ಮಾತುಗಳು ಕೇಳಿಬಂದಿವೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.