ಸೋನಲ್ ಮೊಂತೆರೋ, ತರುಣ್ ಸುಧೀರ್, ಗೌರಿ ಹಾಗೂ ನಟಿ ಶ್ರುತಿ
ಚಿತ್ರ: ಇನ್‌ಸ್ಟಾಗ್ರಾಮ್
ಸ್ಯಾಂಡಲ್‌ವುಡ್ ನಟ, ನಿರ್ದೇಶಕ ತರುಣ್ ಸುಧೀರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಿನ್ನೆ (ಗುರುವಾರ) ತರುಣ್ ಸುಧೀರ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಸೋನಲ್ ಮೊಂತೆರೋ, ತರುಣ್ ಸುಧೀರ್, ಗೌರಿ ಹಾಗೂ ನಟಿ ಶ್ರುತಿ
ಪತ್ನಿ ಹಾಗೂ ಸ್ನೇಹಿತರು ಸೇರಿದಂತೆ ಕುಟುಂಬಸ್ಥರ ಜೊತೆಗೆ ನಿರ್ದೇಶಕ ತರುಣ್ ಸುಧೀರ್ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಸೋನಲ್ ಮೊಂತೆರೋ, ತರುಣ್ ಸುಧೀರ್, ರೋಷನ್, ಅನುಶ್ರೀ
ತರುಣ್ ಸುಧೀರ್ ಹುಟ್ಟುಹಬ್ಬಕ್ಕೆ ಹಿರಿಯ ನಟಿ ಶ್ರುತಿ, ಮಗಳು ಗೌರಿ, ನಟಿ ಪ್ರೇಮಾ, ರಮೇಶ್ ಅರವಿಂದ್, ನಿಶ್ವಿಕಾ ನಾಯ್ಡು, ನಿರೂಪಕಿ ಅನುಶ್ರೀ ಹಾಗೂ ಪತಿ ರೋಷನ್ ಸೇರಿದಂತೆ ಸಾಕಷ್ಟು ತಾರೆಯರು ಭಾಗಿಯಾಗಿದ್ದರು.
ತರುಣ್ ಸುಧೀರ್, ನಟಿ ಶ್ರುತಿ
ತರುಣ್ ಸುಧೀರ್ ಹಾಗೂ ಪತ್ನಿ ಸೋನಲ್ ಮೊಂತೆರೋ ಇಬ್ಬರು ಒಂದೇ ರೀತಿಯ ಬಟ್ಟೆಯನ್ನು ಹಾಕಿಕೊಂಡು ಫೋಟೊಗೆ ಪೋಸ್ ಕೊಟ್ಟಿದ್ದಾರೆ. ತರುಣ್ ಸುಧೀರ್ ಹುಟ್ಟುಹಬ್ಬದ ಫೋಟೊಗಳನ್ನು ಶ್ರುತಿ ಮಗಳು ಗೌರಿ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಪತಿ ತರುಣ್ ಸುಧೀರ್ ಹುಟ್ಟುಹಬ್ಬದ ನಿಮಿತ್ತ ಪತ್ನಿ ಸೋನಲ್ ಮೊಂತೆರೋ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಶೇಷವಾದ ವಿಡಿಯೊವನ್ನು ಹಂಚಿಕೊಂಡು ಶುಭ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.