
2023ರಲ್ಲಿ ತೆರೆಕಂಡ 'ದಿ ಕೇರಳ ಸ್ಟೋರಿ' ವಿವಾದಗಳ ನಡುವೆಯೂ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿತ್ತು. ಅದರ -ಮುಂದುವರಿದ ಭಾಗ 'ದಿ ಬಿಯಾಂಡ್ ದಿ ಕೇರಳ ಸ್ಟೋರಿ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ನಾರಾಯಣ್ ಸಿಂಗ್ ನಿರ್ದೇಶನದ ಈ ಚಿತ್ರವನ್ನು ಸನ್‌ಶೈನ್ ಪಿಕ್ಚರ್ಸ್ ಬ್ಯಾನರ್ ಅಡಿ ವಿಪುಲ್ ಅಮೃತ ಲಾಲ್ ಶಾ ಅವರು ನಿರ್ಮಾಣ ಮಾಡಿದ್ದಾರೆ.
ಟ್ರೇಲರ್‌ನಲ್ಲಿ ‘ಮೂವರು ಯುವತಿಯರು ಪ್ರೀತಿಯಲ್ಲಿ ಬಿದ್ದು ಮೋಸ ಹೋಗುತ್ತಾರೆ. ಬಳಿಕ ಆ ಯುವತಿಯರನ್ನು ಬಲವಂತವಾಗಿ ಲವ್ ಜಿಹಾದ್‌ಗೆ ಒಳಪಡಿಸುವುದನ್ನು ನೋಡಬಹುದು. ಈ ಚಿತ್ರದ ಮೊದಲಿನ ಭಾಗದಂತೆ ಎರಡನೇ ಭಾಗದಲ್ಲೂ ಮತಾಂತರದ ವಿಷಯವನ್ನು ಎತ್ತಿ ಹಿಡಿಯಲಾಗಿದೆ.
'ದಿ ಕೇರಳ ಸ್ಟೋರಿ' ಸಿನಿಮಾದ ಎರಡನೇ ಅಧ್ಯಾಯದ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಿಡಿಕಾರಿದ್ದಾರೆ. ‘ಈ ಚಿತ್ರವನ್ನು ರಾಜ್ಯದ ವಿರುದ್ಧ ದ್ವೇಷ ಹರಡುವ ಹಾಗೂ ಜಾತ್ಯತೀತ ಸಂಪ್ರದಾಯವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಮಾಡಲಾಗಿದೆ ಇಂತಹ ಚಿತ್ರಕಥೆಗಳನ್ನು ಸ್ವೀಕರಿಸಬಾರದು' ಎಂದಿದ್ದಾರೆ.
'ದಿ ಬಿಯಾಂಡ್ ದಿ ಕೇರಳ ಸ್ಟೋರಿ'ವು ಫೆ.27ರಂದು ತೆರೆಗೆ ಬರಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.