ADVERTISEMENT

ಪ್ಯಾನ್ ಇಂಡಿಯಾಗಾಗಿ ಸಿನಿಮಾ ಮಾಡಿಲ್ಲ: ಕೆಜಿಎಫ್, ಕಾಂತಾರ ಉಲ್ಲೇಖಿಸಿ ನಟ ಸತೀಶ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಡಿಸೆಂಬರ್ 2025, 11:06 IST
Last Updated 5 ಡಿಸೆಂಬರ್ 2025, 11:06 IST
   

ನಟ ಸತೀಶ್ ನೀನಾಸಂ ‘ದಿ ರೈಸ್ ಆಫ್ ಅಶೋಕ‘ ಚಿತ್ರ ಕುರಿತು ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

‘ದಿ ರೈಸ್ ಆಫ್ ಅಶೋಕ‘ ಚಿತ್ರ ಕುರಿತು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ನಿನಾಸಂ ಸತೀಶ್, ‘ಪ್ಯಾನ್ ಇಂಡಿಯಾಗೋಸ್ಕರ ಸಿನಿಮಾ ಮಾಡಿಲ್ಲ. ‘ಕೆಜಿಎಫ್‘, ‘ಕಾಂತಾರ‘ ಚಿತ್ರದಂತೆ ನಮ್ಮ ಚಿತ್ರವೂ ಯಶಸ್ವಿಯಾಗಬೇಕು ಎಂದು ಕಲಾವಿದರು ಕನಸು ಕಾಣುವುದು ತಪ್ಪಲ್ಲ. ಹಾಗಂತ ನಾನು ಈ ಚಿತ್ರಕ್ಕಾಗಿ ಸಾವಿರಾರು ಕೋಟಿ ಖರ್ಚು ಮಾಡಿಸಿಲ್ಲ. ಕಳಪೆ ಗುಣಮಟ್ಟದ ಸಿನಿಮಾ ಮಾಡಲು ನನಗೆ ಇಷ್ಟ ಇಲ್ಲ’ ಎಂದಿದ್ದಾರೆ.

‘ದಿ ರೈಸ್ ಆಫ್ ಅಶೋಕ‘ ಸಿನಿಮಾ ಮಾಲೀಕ ಮತ್ತು ಕೂಲಿ ಕಾರ್ಮಿಕರ ನಡುವಿನ ರೆಟ್ರೊ ಶೈಲಿಯ ಕಥೆಯಾಗಿದೆ. ಕ್ರಾಂತಿಕಾರಿ ಅಶೋಕನ ಪಾತ್ರದಲ್ಲಿ ಸತೀಶ್ ನೀನಾಸಂ ನಟಿಸಿದ್ದಾರೆ.

ADVERTISEMENT

ಈ ಚಿತ್ರವನ್ನು ಮನು ಶೆಡ್ಡಾರ್ ಅವರು ನಿರ್ದೇಶನ ಮಾಡುತ್ತಿದ್ದು, ಛಾಯಾಚಿತ್ರಗ್ರಹಣ ಲವಿತ್, ವೃದ್ಧಿ ಕ್ರಿಯೇಷನ್ಸ್ ಜೊತೆಗೆ ಸತೀಶ್‌ ನೀನಾಸಂ ಕೂಡ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.