ADVERTISEMENT

Toxic: ಟಾಕ್ಸಿಕ್‌ನಲ್ಲಿ ಯಶ್ ‘ಟಿಕೆಟ್’ ಲುಕ್ ಎಐ ಎಂದವರಿಗೆ ಇಲ್ಲಿದೆ ಉತ್ತರ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಫೆಬ್ರುವರಿ 2026, 7:44 IST
Last Updated 23 ಫೆಬ್ರುವರಿ 2026, 7:44 IST
   

ಭಾರತೀಯ ಸಿನಿ ಪ್ರೇಕಕ್ಷಕರ ಬಹುನಿರೀಕ್ಷಿತ ಸಿನಿಮಾ ಆಗಿರುವ ‘ಟಾಕ್ಸಿಕ್’ ಮಾರ್ಚ್ 19ರಂದು ಬಿಡುಗಡೆಗೆ ಸಿದ್ದವಾಗುತ್ತಿದೆ. ಇತ್ತೀಚೆಗೆ ಈ ಸಿನಿಮಾದ ಟೀಸರ್ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಯಶ್ ಅವರು ಎರಡು ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದರಲ್ಲಿ ಉದ್ದನೆಯ ಗಡ್ಡ ಬಿಟ್ಟುಕೊಂಡಿರುವ ‘ರಾಯ’ ಪಾತ್ರ. ಇನ್ನೊಂದರಲ್ಲಿ ಗಡ್ಡ ಇಲ್ಲದ ಹದಿಹರೆಯದ ಯುವಕನಂತೆ ಕಾಣುವ ‘ಟಿಕೆಟ್’. ಈ ಎರಡು ಪಾತ್ರಗಳಲ್ಲಿ ಯಶ್ ಕಾಣಿಸಿಕೊಂಡು ಸಿನಿಮಾ ಅಭಿಮಾನಿಗಳಿಗೆ ಕುತೂಹಲ ಹೆಚ್ಚಿಸಿದ್ದಾರೆ.

ಅನೇಕರು ಈ ಗಡ್ಡ ಇಲ್ಲದ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಯಶ್ ಅವರದ್ದು ಎಐ (ಆರ್ಟಿಫಿಷಿಯಲ್ ಇಂಟೆಲಿಜನ್ಸ್) ಮೂಲಕ ಸೆಟ್ ಮಾಡಿರುವ ಲುಕ್ ಎಂದು ಹೇಳುತ್ತಿದ್ದರು. ಆದರೆ, ಈ ವಿಭಿನ್ನ ಲುಕ್ ಅನ್ನು ಹೇಗೆ ಮಾಡಲಾಯಿತು ಎಂಬುದರ ಕುರಿತು ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಗಿರುವ ಅಲೆಕ್ಸ್ ವಿಜಯಕಾಂತ್ ವಿಡಿಯೊ ಹಂಚಿಕೊಂಡು ಸ್ಪಷ್ಟನೆ ನೀಡಿದ್ದಾರೆ.

ADVERTISEMENT

ಯಶ್ ಅವರ ಲುಕ್​ ಅನ್ನು ಹೇಗೆ ಬದಲಾಯಿಸಲಾಯಿತು ಎಂಬುದರ ಕುರಿತು ವಿಡಿಯೊ ಹಂಚಿಕೊಂಡಿರುವ ಅಲೆಕ್ಸ್ ವಿಜಯಕಾಂತ್, ವಿಡಿಯೊದಲ್ಲಿ ಯಶ್ ಮೇಕ್ ಓವರ್ ಹೇಗೆ ಮಾಡಲಾಯಿತು ಎಂಬುದನ್ನು ತೋರಿಸಿದ್ದಾರೆ. ಹೇರ್ ಕಟ್, ಗಡ್ಡ ಟ್ರಿಮ್ ಬಳಿಕ ಯಶ್ ಹೇಗೆ ಕಾಣಿಸಿಕೊಂಡಿದ್ದಾರೆ ಎಂಬುದನ್ನು ವಿಡಿಯೊದಲ್ಲಿ ತೋರಿಸಿದ್ದಾರೆ.

ಇನ್ನೂ ಟಾಕ್ಸಿಕ್ ಸಿನಿಮಾಗಾಗಿ ಸಾಕಷ್ಟು ಶ್ರಮವಹಿಸಿರುವ ಯಶ್ ಅವರು, ಪ್ರತಿಯೊಂದು ಪಾತ್ರವೂ ನೈಸರ್ಗಿಕವಾಗಿ ಕಾಣುವಂತೆ ನೋಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.