
ನಟ ಯಶ್
ಚಿತ್ರ: ಕೆವಿಎನ್ ಯೂಟ್ಯೂಬ್
ನಟ ಯಶ್ ಅಭಿಮಾನಿಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ಟೀಸರ್ ಇಂದು (ಫೆ.20) ಬಿಡುಗಡೆಯಾಗಿದೆ. ಟಾಕ್ಸಿಕ್ ಸಿನಿಮಾದ ಸಣ್ಣ ಝಲಕ್ ಈಗ ಹೊರ ಬಂದಿದೆ. ಕೆವಿಎನ್ ಯೂಟ್ಯೂಬ್ ಚಾನೆಲ್‌ನಲ್ಲಿ ಟಾಕ್ಸಿಕ್ ಟೀಸರ್ ರಿಲೀಸ್ ಆಗಿದೆ.
ಬಿಡುಗಡೆಯಾದ ಟೀಸರ್‌ನಲ್ಲಿ ಈ ಸಲ ಯುದ್ಧವೇ ಬೇರೆ ಅನ್ನೋ ಡೈಲಾಗ್ ಇದ್ದು, ವಿಭಿನ್ನ ಲುಕ್‌ನಲ್ಲಿ ನಟ ಯಶ್ ಅಬ್ಬರಿಸಿದ್ದಾರೆ. ಟೀಸರ್‌ನಲ್ಲಿ ರಾಯನಾಗಿ ಯಶ್ ಘರ್ಜಿಸಿದ್ದಾರೆ. 1 ನಿಮಿಷ 55 ಸೆಕೆಂಡ್ ಇರುವ ಟಾಕ್ಸಿಕ್ ಟೀಸರ್ ಇದಾಗಿದ್ದು, ರಕ್ತಸಾಗರ ಹರಿಸುವ ರಾಯ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದಾರೆ.
ಈ ಬಹುನಿರೀಕ್ಷಿತ ಸಿನಿಮಾದ 2026 ಮಾರ್ಚ್ 19ರಂದು ಬಿಡುಗಡೆಯಾಗುತ್ತಿದ್ದು, ಸಿನಿಮಾ ಬಿಡುಗಡೆಗೆ ತಿಂಗಳು ಬಾಕಿ ಇರುವಾಗಲೇ ಆಕ್ಷನ್ ಟೀಸರ್ ಧೂಳೆಬ್ಬಿಸೋಕೆ ಸಜ್ಜಾಗಿದೆ. ಇನ್ನು, ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಟಾಕ್ಸಿಕ್ ಸಿನಿಮಾದಲ್ಲಿ ಸ್ಟಾರ್ ನಟಿಯರ ದೊಡ್ಡ ಸಮೂಹವೇ ಇದೆ. ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ಕಿಯಾರಾ ಅಡ್ವಾಣಿ ಹಾಗೂ ತಾರಾ ಅವರ ಪಾತ್ರಗಳನ್ನು ಈಗಾಗಲೇ ಪರಿಚಯಿಸಲಾಗಿದೆ. ಈ ಸಿನಿಮಾ ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಾಣ ಮಾಡಿದೆ. ವಿಶೇಷ ಏನೆಂದರೆ ಈ ಸಿನಿಮಾದ ಕಥೆ, ಚಿತ್ರಕಥೆ, ಡೈಲಾಗ್ ಅನ್ನು ರಾಕಿಂಗ್ ಸ್ಟಾರ್ ಯಶ್ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.