ADVERTISEMENT

‘ಸ್ಪಿರಿಟ್‌’ ಚಿತ್ರದಿಂದ ದೀಪಿಕಾ ಔಟ್‌; ಪ್ರಭಾಸ್‌ಗೆ ನಾಯಕಿಯಾದ ತೃಪ್ತಿ ಡಿಮ್ರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಮೇ 2025, 7:38 IST
Last Updated 25 ಮೇ 2025, 7:38 IST
   

ಪ್ರಭಾಸ್ ನಟಿಸಿ, ಸಂದೀಪ್ ರೆಡ್ಡಿ ವಂಗ ನಿರ್ದೇಶಿಸುತ್ತಿರುವ ‘ಸ್ಪಿರಿಟ್’ ಚಿತ್ರ ನಾಯಕಿ ವಿಚಾರವು ಇತ್ತೀಚೆಗೆ ಸುದ್ದಿಯಲ್ಲಿತ್ತು. ಈ ಮೊದಲು ದೀಪಿಕಾ ಪಡುಕೋಣೆ ಚಿತ್ರದ ನಾಯಕಿ ಎನ್ನಲಾಗಿತ್ತು. ಕಾರಣಾಂತರಗಳಿಂದ ಅವರು ಚಿತ್ರತಂಡದಿಂದ ಹೊರನಡೆದಿದ್ದು ಸುದ್ದಿಯಾಗಿತ್ತು. ‘ಅನಿಮಲ್’ ಚಿತ್ರದಲ್ಲಿ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದ ತೃಪ್ತಿ ದಿಮ್ರಿ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

ಸಂದೀಪ್ ರೆಡ್ಡಿ ವಂಗ ‘ಅನಿಮಲ್’ ಚಿತ್ರ ನಿರ್ದೇಶಿಸಿದ್ದರು. ಹೀಗಾಗಿ ಆ ತಂಡದ ನಟಿಗೆ ಮತ್ತೆ ಅವಕಾಶ ನೀಡಿದ್ದಾರೆ. ಕನ್ನಡದ ನಟಿ ರುಕ್ಮಿಣಿ ವಸಂತ್‌ ಈ ಚಿತ್ರದ ನಾಯಕಿಯಾಗಲಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಇದೀಗ ಎಲ್ಲ ಊಹಾಪೋಹಗಳಿಗೂ ತೆರೆ ಬಿದ್ದಿದ್ದು, ತೃಪ್ತಿ ಡಿಮ್ರಿ ಚಿತ್ರದಲ್ಲಿ ಪ್ರಭಾಸ್‌ಗೆ ಜೋಡಿಯಾಗಲಿದ್ದಾರೆ. ತೃಪ್ತಿ ಡಿಮ್ರಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. 

‘ಅರ್ಜುನ್ ರೆಡ್ಡಿ’, ‘ಕಬೀರ್ ಸಿಂಗ್’ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿರುವ ವಂಗ ಅವರ ಈ ಸಿನಿಮಾ ಹಲವಾರು ಕಾರಣಗಳಿಂದ ನಿರೀಕ್ಷೆ ಹೆಚ್ಚಿಸಿದೆ. ತೆಲುಗು, ಕನ್ನಡ, ಹಿಂದಿ, ಮಲಯಾಳ, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ‘ಸ್ಪಿರಿಟ್’ ಸಿನಿಮಾ ಸಿದ್ಧಗೊಳ್ಳಲಿದೆ.

ADVERTISEMENT

ಸಂಭಾವನೆ ಹಾಗೂ ಚಿತ್ರೀಕರಣಕ್ಕೆ ಸಂಬಂಧಿಸಿದ ಕೆಲ ಷರತ್ತುಗಳಿಂದ ಚಿತ್ರತಂಡ ದೀಪಿಕಾ ಅವರನ್ನು ಕೈಬಿಟ್ಟಿದೆ ಎಂದು ಹಿಂದಿ ಮಾಧ್ಯಮಗಳು ವರದಿ ಮಾಡಿವೆ. ಭೂಷಣ್‌ ಕುಮಾರ್‌ ಹಾಗೂ ಪ್ರಣಯ್‌ ರೆಡ್ಡಿ ವಂಗ ನಿರ್ಮಾಣದ ಈ ಚಿತ್ರ ಪ್ರೀಪ್ರೊಡಕ್ಷನ್‌ ಹಂತದಲ್ಲಿದ್ದು ಈ ವರ್ಷವೇ ಸೆಟ್ಟೇರಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.