ADVERTISEMENT

‘ಉಗ್ರಾಯುಧಮ್' ಚಿತ್ರದ ಮುಹೂರ್ತ: ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಶ್ರೀಮುರುಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಅಕ್ಟೋಬರ್ 2025, 11:52 IST
Last Updated 6 ಅಕ್ಟೋಬರ್ 2025, 11:52 IST
<div class="paragraphs"><p>ಚಿತ್ರ ಕೃಪೆ:&nbsp;<a href="https://x.com/SRIMURALIII">@SRIMURALIII</a></p></div>

ಚಿತ್ರ ಕೃಪೆ: @SRIMURALIII

   

ಶ್ರೀಮುರುಳಿ ನಟನೆಯ 'ಉಗ್ರಾಯುಧಮ್' ಚಿತ್ರದ ಮುಹೂರ್ತ ಇಂದು (ಸೋಮವಾರ) ಬಂಡೆ ಮಹಾಕಾಳಮ್ಮ ದೇವಾಲಯದಲ್ಲಿ ನೇರವೇರಿದೆ. ‘ನಮ್ಮ ಈ ಹೊಸ ಪ್ರಯತ್ನಕ್ಕೆ ನಿಮ್ಮ ಪ್ರೀತಿಯ ಬೆಂಬಲಧಾರಣೆ ನಿರೀಕ್ಷಿಸುತ್ತೇವೆ‘ ಎಂದು ಚಿತ್ರತಂಡ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದೆ.

'ಉಗ್ರಾಯುಧಮ್' ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದ್ದು, ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರತಂಡಕ್ಕೆ ಶುಭಾಶಯ ತಿಳಿಸುತ್ತಿದ್ದಾರೆ.

ADVERTISEMENT

ಶ್ರೀಮುರುಳಿಯವರು ಕೊನೆಯದಾಗಿ ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ, ಡಾ.ಸೂರಿ ನಿರ್ದೇಶಿಸಿದ್ದ 'ಬಘೀರ' ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಆ ಸಿನಿಮಾದಲ್ಲಿ ಶ್ರೀಮುರುಳಿಗೆ ಜೋಡಿಯಾಗಿ ನಟಿ ರುಕ್ಮಿಣಿ ವಸಂತ್ ಅವರು ನಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.