ನಟ ಉಪೇಂದ್ರ ಹಾಗೂ ಪ್ರಿಯಾಂಕಾ ಅವರು 25ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಸ್ಯಾಂಡಲ್‌ವುಡ್‌ನ ಜೋಡಿ ಕುಟುಂಬ, ಆಪ್ತರ ಸಮ್ಮುಖದಲ್ಲಿ ತಮ್ಮ ವೈವಾಹಿಕ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.
ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿರುವ ಉಪೇಂದ್ರ ದಂಪತಿಗೆ ಅವರ ಆಪ್ತರೊಬ್ಬರು,‘ಪ್ರಿಯಾಂಕಾ ಅವರ ಸಂಸ್ಕೃತಿ, ಭಾಷೆ ಮತ್ತು ಭೌಗೋಳಿಕ ವ್ಯತ್ಯಾಸಗಳನ್ನು ಮೀರಿ ಪ್ರೀತಿ ತೋರಿದ್ದಾರೆ. ಇಬ್ಬರೂ ಅರ್ಥ ಮಾಡಿಕೊಳ್ಳುವಿಕೆ ಗುಣ, ಪರಸ್ಪರ ಗೌರವ, ನಿಮ್ಮ ಬಂಧನ ನಿಜಕ್ಕೂ ಪ್ರೇರಣಾದಾಯಕವಾಗಿದೆ.
ನಗು, ಸಂಗಾತ್ಯ ಮತ್ತು ಪ್ರೀತಿಯಿಂದ ತುಂಬಿದ ದಾಂಪತ್ಯ ಇನ್ನಷ್ಟು ವರ್ಷಗಳು ಸಾಗಲಿ’ ಎಂದು ಬರೆದುಕೊಂಡು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಶುಭಕೋರಿದ್ದಾರೆ.
ಬೆಂಗಾಲಿ ಮೂಲದ ಚೆಲುವೆ ಪ್ರಿಯಾಂಕಾ ಅವರ ಜತೆ ರಿಯಲ್ ಸ್ಟಾರ್ ಉಪೇಂದ್ರ ಅವರು 2001ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪತಿ ಉಪೇಂದ್ರ ಜತೆ ತೆಲುಗಿನ ‘ರಾ’ ಕನ್ನಡದ ‘H2O’ ಚಿತ್ರದಲ್ಲಿ ನಟಿಸಿದ್ದಾರೆ. ನಟನೆ, ನಿರ್ದೇಶನ ಮೂಲಕ ಉಪೇಂದ್ರ ಅವರು ಹೆಸರುವಾಸಿಯಾಗಿದ್ದರೆ, ಇವರ ಪತ್ನಿ ಪ್ರಿಯಾಂಕಾ ಅವರು ನಟನೆ ಮೂಲಕ ಸಿನಿ ಪ್ರಿಯರನ್ನು ಸೆಳೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.