ADVERTISEMENT

ಯಶ್ ಅವರಿಂದ ಕನ್ನಡ ಗೊತ್ತು : ಬಾಲಿವುಡ್ ನಟ ವರುಣ್ ಧವನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ನವೆಂಬರ್ 2025, 12:52 IST
Last Updated 28 ನವೆಂಬರ್ 2025, 12:52 IST
   

ಚಿತ್ರೀಕರಣದ ವೇಳೆ ನಟಿ ಕೀರ್ತಿ ಸುರೇಶ್ ಹಾಗೂ ಬಾಲಿವುಡ್ ನಟ ವರುಣ್ ಧವನ್ ಕನ್ನಡದ ಬಗ್ಗೆ ಮಾತನಾಡಿರುವ ವಿಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಚಿತ್ರೀಕರಣದ ಸ್ಥಳದಲ್ಲಿ ನಟಿ ಕೀರ್ತಿ ಸುರೇಶ್ ಅವರು, ದಕ್ಷಿಣ ಭಾರತದ ಭಾಷೆಗಳಾದ ತಮಿಳು, ತೆಲುಗು, ಮಲಯಾಳಂನಲ್ಲಿ ಒಂದೊಂದು ಪದಗಳನ್ನು ನಟ ವರಣ್ ಅವರಿಗೆ ಹೇಳಿಕೊಡುತ್ತಿದ್ದರು. ಕನ್ನಡ ಬರಲ್ಲ ಕಲಿತು ಮಾತಾನಾಡುತ್ತೇವೆ. ಬಳಿಕ ವರಣ್ ಅವರು ಯಶ್ ಅವರಿಂದ ನನಗೆ ಕನ್ನಡ ಗೊತ್ತು ಆದರೆ ಮಾತನಾಡಲು ಗೊತ್ತಿಲ್ಲ ಎಂದಿದ್ದಾರೆ.

ಯಶ್ ನಟನೆಯ ‘ಕೆಜಿಎಫ್‘ ಚಿತ್ರವು ವಿಶ್ವದಾದ್ಯಂತ ಬಿಡುಗಡೆಯಾಗಿ ಯಶಸ್ಸು ಗಳಿಸಿತ್ತು. ಕನ್ನಡದ ಅನೇಕ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡು ಬಾಲಿವುಡ್ ಸೇರಿದಂತೆ ಅನೇಕ ಸಿನಿ ಪ್ರಿಯರನ್ನು ತನ್ನತ್ತ ಸೆಳೆದಿವೆ.

ADVERTISEMENT

ವರುಣ್ ಧವನ್ ಮತ್ತು ವಾಮಿಕಾ ಗಬ್ಬಿ ಅಭಿನಯದ 'ಬೇಬಿ ಜಾನ್' ಚಿತ್ರದ ಮೂಲಕ ನಟಿ ಕೀರ್ತಿ ಸುರೇಶ್ ಅವರು ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.