ADVERTISEMENT

ಮಗನಿಗೆ ವಿಹಾನ್ ಎಂದು ನಾಮಕರಣ ಮಾಡಿದ ವಿಕ್ಕಿ–ಕತ್ರಿನಾ

ಏಜೆನ್ಸೀಸ್
Published 7 ಜನವರಿ 2026, 13:24 IST
Last Updated 7 ಜನವರಿ 2026, 13:24 IST
<div class="paragraphs"><p>ವಿಕ್ಕಿ ಕೌಶಲ್‌, ಕತ್ರಿನಾ ಹಂಚಿಕೊಂಡಿರುವ ಫೋಟೊ</p></div>

ವಿಕ್ಕಿ ಕೌಶಲ್‌, ಕತ್ರಿನಾ ಹಂಚಿಕೊಂಡಿರುವ ಫೋಟೊ

   

ಇನ್ಸ್ಟಾಗ್ರಾಂ ಚಿತ್ರ

ಬಾಲಿವುಡ್‌ನ ತಾರಾ ಜೋಡಿ ವಿಕ್ಕಿ ಕೌಶಲ್‌ ಮತ್ತು ಕತ್ರಿನಾ ಕೈಫ್‌ ಅವರಿಗೆ ನವೆಂಬರ್‌ನಲ್ಲಿ ಗಂಡು ಮಗು ಜನಿಸಿತ್ತು. ಮಗನಿಗೆ ವಿಹಾನ್ ಕೌಶಲ್‌ ಎಂದು ನಾಮಕರಣ ಮಾಡಿದ್ದಾರೆ. 

ADVERTISEMENT

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಕತ್ರಿನಾ, ‘ನಮ್ಮ ಬೆಳಕಿನ ಕಿರಣ, ವಿಹಾನ್. ಪ್ರಾರ್ಥನೆಗಳಿಗೆ ಉತ್ತರ ಸಿಗುತ್ತಿದೆ. ಜೀವನ ಸುಂದರವಾಗಿದೆ. ನಮ್ಮ ಜಗತ್ತು ಕ್ಷಣಾರ್ಧದಲ್ಲಿ ಬದಲಾಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ. 

ಕತ್ರಿನಾ ಹಾಗೂ ವಿಕ್ಕಿ ಕೌಶಲ್‌ ಅವರ ಕೈಮೇಲೆ ಮಗುವಿನ ಪುಟ್ಟ ಕೈ ಇರುವ ಫೋಟೊವನ್ನು ಹಂಚಿಕೊಂಡಿದ್ದಾರೆ. 

42ನೇ ವಯಸ್ಸಿನಲ್ಲಿ ತಾಯಿಯಾದ ನಟಿ ಕತ್ರಿನಾ ಕೈಫ್, ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಬೇಬಿ ಬಂಪ್‌ ಫೋಟೊವನ್ನು ಹಂಚಿಕೊಂಡಿದ್ದರು. ಜೊತೆಗೆ ‘ನಮ್ಮ ಜೀವನದ ಅತ್ಯುತ್ತಮ ಅಧ್ಯಾಯವನ್ನು ಸಂತೋಷ ಮತ್ತು ಕೃತಜ್ಞತೆಯಿಂದ ತುಂಬಿದ ಮನಸ್ಸುಗಳೊಂದಿಗೆ ಪ್ರಾರಂಭಿಸುವ ಹಾದಿಯಲ್ಲಿದ್ದೇವೆ’ ಎಂದು ಬರೆದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.