ವಿಜಯ್ ದೇವರಕೊಂಡ
ಎಕ್ಸ್ ಚಿತ್ರ
ನವದೆಹಲಿ: ತೆಲುಗು ನಟ ವಿಜಯ್ ದೇವರಕೊಂಡ ಅವರು ಮಹಾಕುಂಭ ಮೇಳಕ್ಕೆ ಭೇಟಿ ನೀಡಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ.
ಮಹಾಕುಂಭ ಮೇಳಕ್ಕೆ ತೆರಳಿದ ಚಿತ್ರಗಳನ್ನು ಅವರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
‘ಅರ್ಜುನ್ ರೆಡ್ಡಿ’ ಸಿನಿಮಾ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದ ವಿಜಯ್ ದೇವರಕೊಂಡ ಅವರು ಸದ್ಯ ಕೆಲ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ತಮ್ಮ ತಾಯಿಯೊಂದಿಗೆ ಪ್ರಯಾಗ್‌ರಾಜ್‌ಗೆ ಬಂದ ದೇವರಕೊಂಡ, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನದಲ್ಲಿ ಭಾಗಿಯಾಗಿದ್ದಾರೆ.
‘2025ರ ಮಹಾಕುಂಭ ಮೇಳ– ನಮ್ಮ ಪರಂಪರೆಯ ಮೂಲ ಹಾಗೂ ಬೇರುಗಳ ನೆನಪುಗಳನ್ನು ನನ್ನ ಭಾರತೀಯ ಯುವಜನತೆ ಜತೆಗೂಡಿ ಗೌರವ ಸಲ್ಲಿಸುವ ಮೂಲಕ ನಮ್ಮ ಪಯಣದಲ್ಲಿ ಎಲ್ಲರ ಜತೆಗೂಡುವ ಯೋಜನೆ ಇದೆ. ತಾಯಿಯೊಂದಿಗೆ ಸಲ್ಲಿಸುವ ಪೂಜೆ ಮತ್ತು ಪ್ರಾರ್ಥನೆ ವಿಶೇಷವಾಗಿದೆ. ಈ ಅದ್ಭುತ ತಂಡದೊಂದಿಗೆ ಕಾಶಿ ಯಾತ್ರೆ ಸಾಕಷ್ಟು ಉತ್ತಮ ನೆನಪುಗಳನ್ನು ದಾಖಲಿಸಿವೆ’ ಎಂದು ಬರೆದುಕೊಂಡಿದ್ದಾರೆ.
ಮಹಾಕುಂಭ ಮೇಳವು ಜ. 13ರಿಂದ ಆರಂಭವಾಗಿದ್ದು, ಫೆ. 26ರವರೆಗೆ ನಡೆಯಲಿದೆ. ವಿಕ್ಕಿ ಕೌಶಲ್, ಅನುಪಮ್ ಖೇರ್, ಮಮತಾ ಕುಲಕರ್ಣಿ, ಸುನಿಲ್ ಗ್ರೋವರ್, ಹೇಮಾ ಮಾಲಿನಿ ಸೇರಿ ಚಿತ್ರರಂಗದ ಹಲವು ಗಣ್ಯರು ಪಾಲ್ಗೊಂಡಿದ್ದರು. ದೇವರಕೊಂಡ ಅವರು ಕಲ್ಕಿ 2898ಎಡಿ ಸಿನಿಮಾದಲ್ಲಿ ನಟಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.