ವಿಕ್ರಾಂತ್ ಮಾಸ್ಸಿ,ಶೀತಲಾ ಠಾಕೂರ್
‘12th ಫೇಲ್’ ಸಿನಿಮಾದ ಮೂಲಕ ಜನಪ್ರಿಯತೆ ಗಳಿಸಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟ ವಿಕ್ರಾಂತ್ ಮಾಸ್ಸಿ ಅವರು ತಮ್ಮ 4ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.
2022ರಲ್ಲಿ ಶೀತಲಾ ಠಾಕೂರ್ ಅವರ ಜೊತೆ ವಿಕ್ರಾಂತ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
‘ಬ್ರೋಕನ್ ಬಟ್ ಬ್ಯೂಟಿಫುಲ್’ ವೆಬ್ ಸರಣಿ ಮೂಲಕ ಈ ಜೋಡಿ ಪರಿಚಯವಾಗಿ ದೀರ್ಘಕಾಲ ಸ್ನೇಹಿತರಾಗಿದ್ದರು. ಕೆಲವು ವರ್ಷಗಳ ನಂತರ ಇಬ್ಬರು ವಿವಾಹ ಆಗುವುದಾಗಿ ಘೋಷಿಸಿದರು.
ಈ ಜೋಡಿ ವಿವಾಹಕ್ಕೂ ಮೊದಲು ಪ್ರೇಮಿಗಳ ದಿನದಂದು ವಿವಾಹ ನೋಂದಣಿ ಮಾಡಿಸಿಕೊಂಡಿತ್ತು. ಬಳಿಕ ಕುಟುಂಬಸ್ಥರ ಸಮ್ಮುಖದಲ್ಲಿ 2022ರ ಫೆ.18ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ವಿಕ್ರಾಂತ್ ದಂಪತಿಗೆ 2024ರಲ್ಲಿ ಗಂಡು ಮಗು ಜನಿಸಿತ್ತು. ಪುತ್ರನಿಗೆ ವರ್ಧಾನ್ ಎಂದು ಹೆಸರಿಟ್ಟಿದ್ದರು. ಕುಟುಂಬದೊಂದಿಗೆ ಸಮಯ ಕಳೆಯುವ ಸಲುವಾಗಿ ವಿಕ್ರಾಂತ್ ಮಾಸ್ಸಿ ಅವರು ನಟನೆಯಿಂದ ತಾತ್ಕಾಲಿಕ ವಿರಾಮ ತೆಗೆದುಕೊಂಡರು.
ಕಿರುತೆರೆ ಮೂಲಕ ನಟನೆಗೆ ಪದಾರ್ಪಣೆ ಮಾಡಿದ್ದ ವಿಕ್ರಾಂತ್, ‘ಬಾಲಿಕಾ ವಧು’, ‘ಕುಬೂಲ್ ಹೈ’ ಸೇರಿದಂತೆ ಹಲವು ಜನಪ್ರಿಯ ಧಾರವಾಹಿಗಳಲ್ಲಿ ಕಾಣಿಸಿಕೊಂಡಿದ್ದರು.
2013ರಲ್ಲಿ ‘ಲೂಟೆರಾ’ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶಿಸಿ ಮೊದಮೊದಲು ಸಣ್ಣ ಪಾತ್ರಗಳ ಮೂಲಕ ತಮ್ಮ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದ ವಿಕ್ರಾಂತ್ ಅವರಿಗೆ, ‘12th ಫೇಲ್’ ಚಿತ್ರವು ಭಾರಿ ಯಶಸ್ಸು ತಂದುಕೊಟ್ಟಿತ್ತು.
‘ದಿ ಸಾಬರಮತಿ ರಿಪೋರ್ಟ್' ಸಿನಿಮಾ ಕೂಡ ಮೆಚ್ಚುಗೆಗೆ ಪಾತ್ರವಾಗಿತ್ತು. ಅಲ್ಲದೇ ಹಲವು ವೆಬ್ ಸರಣಿಗಳಲ್ಲಿಯೂ ನಟಿಸಿ ಸೈ ಎನಿಕೊಂಡಿದ್ದರು. ಸದ್ಯ, ವಿಕ್ರಾಂತ್ ಮಾಸ್ಸಿ ‘ಮುಸಾಫಿರ್ ಕೆಫೆ’ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.