
ನಟ ಅನಿರುದ್ಧ, ಪುತ್ರ ಜ್ಯೇಷ್ಠವರ್ಧನ್
ಚಿತ್ರ: ಇನ್‌ಸ್ಟಾಗ್ರಾಂ
ದಿವಂಗತ ನಟ ಡಾ. ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಅವರು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಉದಯ ಟಿವಿಯಲ್ಲಿ ಪ್ರಸಾರವಾಗುವ ಅನಿರುದ್ಧ ನಟನೆಯ ಸೂರ್ಯವಂಶ ಧಾರಾವಾಹಿ 500 ಸಂಚಿಕೆಗಳನ್ನು ಪೂರೈಸಿದೆ. ಈ ಬಗ್ಗೆ ಅನಿರುದ್ಧ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದರು.
ನಟ ಅನಿರುದ್ಧ ಪುತ್ರ ಜ್ಯೇಷ್ಠವರ್ಧನ್
ಇದರ ನಡುವೆ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಮೊಮ್ಮಗ, ನಟ ಅನಿರುದ್ಧ ಪುತ್ರ ಜ್ಯೇಷ್ಠವರ್ಧನ್ ಇತ್ತೀಚಿನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಜ್ಯೇಷ್ಠವರ್ಧನ್ ಫೋಟೊಗಳನ್ನು ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅನಿರುದ್ಧ ಅವರು ಹಂಚಿಕೊಂಡ ಈ ಚಿತ್ರಗಳಲ್ಲಿ ಜ್ಯೇಷ್ಠವರ್ಧನ್ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಣ್ಣಿಗೆ ಕನ್ನಡಕ, ಕಪ್ಪು ಉಡುಗೆಯಲ್ಲಿ ಮಿಂಚಿದ್ದಾರೆ.
ನಟ ಅನಿರುದ್ಧ ಪುತ್ರ ಜ್ಯೇಷ್ಠವರ್ಧನ್
ಅನಿರುದ್ಧ ಪುತ್ರ ಜ್ಯೇಷ್ಠವರ್ಧನ್ ಅವರು ಇಂಗ್ಲಿಷ್, ಮನೋವಿಜ್ಞಾನ, ಸಂವಹನ, ಮತ್ತು ಮಾಧ್ಯಮ ವಿಷಯಗಳಲ್ಲಿ ಬಿಎ ಮಾಡಿದ್ದಾರೆ.
ಅಂದಹಾಗೆ, ಜ್ಯೇಷ್ಠವರ್ಧನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ತಂದೆಯಂತೆ ಸಕ್ರಿಯರಾಗಿದ್ದಾರೆ. ತಂದೆ ಅನಿರುದ್ಧ ಅವರ ಜೊತೆಗೆ ರೀಲ್ಸ್, ಡ್ಯಾನ್ಸ್, ಹಾಡು, ಫೋಟೊಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಹೀಗಾಗಿ ಡಾ. ವಿಷ್ಣುವರ್ಧನ್, ಡಾ. ಭಾರತಿ ವಿಷ್ಣುವರ್ಧನ್ ಮತ್ತು ತಂದೆ ಅನಿರುದ್ಧ್ ಅವರ ಹಾಗೇ ಜ್ಯೇಷ್ಠವರ್ಧನ್ ಕೂಡ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಾರಾ? ಎಂಬ ಕುತೂಹಲ ಹೆಚ್ಚಾಗಿದೆ.
ನಟ ಅನಿರುದ್ಧ, ಪುತ್ರ ಜ್ಯೇಷ್ಠವರ್ಧನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.