ADVERTISEMENT

ದುಬೈನಲ್ಲಿ ಬಿಡುಗಡೆಯಾದ ಕನ್ನಡದ ‘ವೈಲ್ಡ್ ಟೈಗರ್ ಸಫಾರಿ’ ಸಿನಿಮಾದ ಟೀಸರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜನವರಿ 2026, 7:38 IST
Last Updated 12 ಜನವರಿ 2026, 7:38 IST
<div class="paragraphs"><p>ವೈಲ್ಡ್ ಟೈಗರ್ ಸಫಾರಿ ಸಿನಿಮಾ ತಂಡ</p></div>

ವೈಲ್ಡ್ ಟೈಗರ್ ಸಫಾರಿ ಸಿನಿಮಾ ತಂಡ

   

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾಗೆ ಸಂಭಾಷಣೆ ಬರೆದಿದ್ದ ಚಂದ್ರಮೌಳಿ ಅವರ ನಿರ್ದೇಶದಲ್ಲಿ ಮೂಡಿಬರುತ್ತಿರುವ ‘ವೈಲ್ಡ್ ಟೈಗರ್ ಸಫಾರಿ’ ಸಿನಿಮಾದ ಟೀಸರ್ ಜ.10ರಂದು ಬಿಡುಗಡೆಯಾಗಿದೆ. ವಿಶೇಷ ಏನೆಂದರೆ ದುಬೈನ ಸುಪ್ರಸಿದ್ಧ ಗ್ಲೋಬಲ್ ವಿಲೇಜ್‌ನಲ್ಲಿ ಈ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ.

ವೈಲ್ಡ್ ಟೈಗರ್ ಸಫಾರಿ ತಂಡದವರು

ADVERTISEMENT

ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾ ‘ವೈಲ್ಡ್ ಟೈಗರ್ ಸಫಾರಿ’ ಟೀಸರ್ ಲಾಂಚ್ ಕಾರ್ಯಕ್ರಮ ದುಬೈನಲ್ಲಿ ಅದ್ಧೂರಿಯಾಗಿ ನಡೆದಿದೆ. ವೈಲ್ಡ್ ಟೈಗರ್ ಸಫಾರಿಗೆ ಬಾಲಿವುಡ್ ಕೊರಿಯೋಗ್ರಾಫರ್‌ ರೆಮೋ ಡಿ ಸೋಜಾ ಸಾಥ್ ನೀಡಿದ್ದಾರೆ. ಟೀಸರ್ ಲಾಂಚ್ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ. ಸಚಿನ್ ಬಸ್ರೂರು ಸಂಗೀತ ನಿರ್ದೇಶನ ಚಿತ್ರಕ್ಕಿದ್ದು, ಗಣೇಶ್ ಆಚಾರ್ಯ ಹಾಗೂ ಇರ್ಮಾನ್ ಸರ್ದಾರಿಯಾ ಕೊರಿಯೋಗ್ರಫಿ ಮಾಡಿದ್ದಾರೆ.

ಇನ್ನು, ಶೀಥಲ್ ಪೂಜಾರಿ ಸಿನಿಮಾದ ನಾಯಕನಾಗಿದ್ದು, ನಿಮಿಕಾ ರತ್ನಾಕರ್ ನಾಯಕಿಯಾಗಿ ನಟಿಸಿದ್ದಾರೆ. ಶೀಥಲ್ ಪೂಜಾರಿ ಅವರು ಈ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಕ್ರಾಂತಿ ಸಿನಿಮಾದಲ್ಲಿ ‘ಶೇಕ್ ಇಟ್ ಪುಷ್ಪವತಿ’ ಹಾಡಿನಲ್ಲಿ ನೃತ್ಯ ಮಾಡಿದ್ದ ನಿಮಿಕಾ ಸೇರಿದಂತೆ ಧರ್ಮೇಶ್, ಸುಶಾಂತ್, ಕೆಜಿಎಫ್ ಅವಿನಾಶ್, ಅಚ್ಯುತ್ ಕುಮಾರ್ ನಟಿಸಿದ್ದಾರೆ. ಈ ಸಿನಿಮಾವನ್ನು ವಿಕೆ ಫಿಲ್ಮಂ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ದುಬೈನಲ್ಲಿಯೇ ನೆಲೆಸಿರುವ ವಿನೋದ್ ಕುಮಾರ್, ಕಿಶೋರ್ ಕುಮಾರ್, ಪ್ರಸನ್ನ ಕುಮಾರ್ ಹಾಗೂ ಗುರುದತ್ ಗಾಣಿಗ ಜಂಟಿಯಾಗಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.