
ನಟ ಯಶ್
ಭಾರತೀಯ ಸಿನಿಮಾರಂಗದಲ್ಲಿ ಸಂಚಲನ ಸೃಷ್ಟಿಸಿರುವ ನಟ ಎಂದರೆ ರಾಕಿಂಗ್ ಸ್ಟಾರ್ ಯಶ್. ‘ಕೆಜಿಎಫ್’ ಎನ್ನುವ ಪ್ಯಾನ್ ಇಂಡಿಯಾ ಸಿನಿಮಾ ನೀಡಿದ್ದ ಯಶ್ ಇಡೀ ವಿಶ್ವವೇ ಕನ್ನಡ ಸಿನಿಮಾ ರಂಗವನ್ನು ತಿರುಗಿ ನೋಡುವಂತೆ ಮಾಡಿದ ವ್ಯಕ್ತಿ. ‘ಕೆಜಿಎಫ್ ಚಾಪ್ಟರ್ 2’ ಆದ ಬಳಿಕ ಯಾವ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಕುತೂಹಲ ಜನರಿಗಿತ್ತು. ಅದಕ್ಕೆ ‘ಟಾಕ್ಸಿಕ್’ ಚಿತ್ರದ ಮೂಲಕ ಉತ್ತರವನ್ನು ಕೊಟ್ಟಿದ್ದರು.
ಐಎಂಡಿಬಿ (IMDb) ವರದಿ
ಇಡೀ ಭಾರತವೇ ಈ ಚಿತ್ರ ಬಿಡುಗಡೆಗಾಗಿ ಕಾಯುತ್ತಿದೆ. ಮಾರ್ಚ್ 19ರಂದು ತೆರೆಯ ಮೇಲೆ ಅಪ್ಪಳಿಸಲು ಸಜ್ಜಾಗಿರುವ ಈ ಚಿತ್ರವನ್ನು ಗೀತು ಮೋಹನ್ ದಾಸ್ ಅವರು ನಿರ್ದೇಶಿಸುತ್ತಿದ್ದಾರೆ. ಐಎಂಡಿಬಿ (IMDb) ವರದಿ ಪ್ರಕಾರ, 2026ರ ಬಹುನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ‘ಟಾಕ್ಸಿಕ್’ ಸಿನಿಮಾ ನಂಬರ್ 1 ಸ್ಥಾನ ಪಡೆದುಕೊಂಡಿದೆ. ಟಾಪ್ 10 ಸಿನಿಮಾಗಳ ಜನಪ್ರಿಯತೆಯ ಆಧಾರದಲ್ಲಿ ‘ಟಾಕ್ಸಿಕ್’ ಸಿನಿಮಾ ಶೇಕಡ 28.2 ಪಾಲನ್ನು ಹೊಂದಿದೆ. ಆ ಮೂಲಕ ‘ಧುರಂಧರ್ 2’, ‘ಓ ರೋಮಿಯೋ’, ‘ದಿ ಪ್ಯಾರಡೈಸ್’, ‘ಪೆದ್ದಿ’ ಮುಂತಾದ ಸಿನಿಮಾಗಳನ್ನು ಹಿಂದಿಕ್ಕಿದೆ.
ಈಗಾಗಲೇ ಚಿತ್ರತಂಡ ಸಿನಿಮಾದಲ್ಲಿರುವ ಮಹಿಳಾ ನಟಿಮಣಿಗಳ ಪಾತ್ರದ ಹೆಸರು ಹಾಗೂ ಲುಕ್ ಬಿಡುಗಡೆ ಮಾಡಿದೆ. ಜೊತೆಗೆ ಯಶ್ ಅವರ ಪಾತ್ರದ ಪರಿಚಯವು ಆಗಿದೆ. ಈ ಅಪ್‌ಡೇಟ್‌ಗಳು ಜನರಲ್ಲಿ ಮತ್ತಷ್ಟು ಕುತೂಹಲವನ್ನು ಹುಟ್ಟು ಹಾಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.