ADVERTISEMENT

ಯಶ್ ಟಾಕ್ಸಿಕ್ ಚಿತ್ರದ ನಾಯಕಿಯಾಗಿ ನಯನತಾರಾ ಫಿಕ್ಸ್?

ನಟ ಯಶ್ ಅವರ 19 ನೇ ಚಿತ್ರ ಟಾಕ್ಸಿಕ್ (TOXIC) ತಯಾರಿ ಜೋರು ನಡೆಯುತ್ತಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಮೇ 2024, 10:03 IST
Last Updated 5 ಮೇ 2024, 10:03 IST
<div class="paragraphs"><p>ನಟಿ ನಯನತಾರಾ</p></div>

ನಟಿ ನಯನತಾರಾ

   

ಚಿತ್ರಕೃಪೆ: ಇನ್‌ಸ್ಟಾಗ್ರಾಮ್‌

ಬೆಂಗಳೂರು: ನಟ ಯಶ್ ಅವರ 19 ನೇ ಚಿತ್ರ ಟಾಕ್ಸಿಕ್ (TOXIC) ತಯಾರಿ ಜೋರು ನಡೆಯುತ್ತಿದೆ. ಈ ಚಿತ್ರವನ್ನು ಮಲಯಾಳಂನ ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿದ್ದಾರೆ.

ADVERTISEMENT

ಆದರೆ, ಈ ಸಿನಿಮಾದ ನಾಯಕಿ ಪಾತ್ರದ ಆಯ್ಕೆ ಇನ್ನೂ ಮುಗಿಯುತ್ತಿಲ್ಲ. ಯಶ್ ಎದುರಾಗಿ ಮುಖ್ಯ ಪಾತ್ರದಲ್ಲಿ ಬಾಲಿವುಡ್ ಬೆಬೋ ಕರೀನಾ ಕಪೂರ್ ನಟಿಸಬೇಕಿತ್ತು. ಆದರೆ, ದಿನಾಂಕ ಹೊಂದಾಣಿಕೆಯಾಗದೇ ಅವರು ಈ ಚಿತ್ರಕ್ಕೆ ಕಾಲ್‌ಶೀಟ್ ಕೊಡಲು ಆಗುತ್ತಿಲ್ಲ. ಇದರಿಂದ ಅವರು ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಕಿಯಾರಾ ಅಡ್ವಾಣಿ ಅವರಿಗೂ ಚಿತ್ರ ತಂಡ ಸಂಪರ್ಕಿಸಿತ್ತು. ಆದರೆ, ಅವರೂ ಸಹ ಒಪ್ಪಿರಲಿಲ್ಲ.

ಗೀತು ಮೋಹನ್‌ದಾಸ್ ಅವರು ಕರೀನಾ ಅವರನ್ನು ಕೈಬಿಟ್ಟು ಇದೀಗ ಬಹುಭಾಷಾ ನಟಿ ತಮಿಳಿನ ನಯನತಾರಾ ಅವರನ್ನು ಸಂಪರ್ಕಿಸಿದ್ದಾರಂತೆ. ಕಥೆ ಕೇಳಿರುವ ನಯನತಾರಾ ಉತ್ಸುಕರಾಗಿದ್ದು ಟಾಕ್ಸಿಕ್ ಚಿತ್ರದಲ್ಲಿ ಯಶ್ ಎದುರಾಗಿ ಅವರೇ ಬಹುತೇಕ ಅಂತಿಮಗೊಳ್ಳುವ ಸಾಧ್ಯತೆ ಇದೆ. ಈ ಕುರಿತು ಪಿಂಕ್ ವಿಲ್ಲಾ ವೆಬ್‌ಸೈಟ್ ವರದಿ ಮಾಡಿದೆ.

ಅಲ್ಲದೇ ಈ ಹಿಂದೆ ಸಹಪಾತ್ರಗಳ ಆಯ್ಕೆಗೆ ನಿರ್ಮಾಣ ಸಂಸ್ಥೆ ಕೆವಿಎನ್‌ ಫ್ರೊಡಕ್ಸನ್‌ ಕಾಸ್ಟಿಂಗ್ ಕಾಲ್ ಕೊಟ್ಟಿತ್ತು. ಆಸಕ್ತ ಪುರುಷ, ಮಹಿಳೆ, ಮಕ್ಕಳು ತಮ್ಮ ಪ್ರತಿಭೆ ತೋರಿಸುವ ವಿಡಿಯೊ ತುಣಕನ್ನು ಕೆವಿಎನ್‌ಗೆ ಕಳುಹಿಸಿಕೊಡಬೇಕು ಎಂದು ಮನವಿ ಮಾಡಿಕೊಂಡಿತ್ತು.

ಕನ್ನಡಕ್ಕೆ RRR ಅಂತಹ ಮಹತ್ವದ ಚಿತ್ರವನ್ನು ತಂದ ‘ಕೆವಿಎನ್ ಪ್ರೊಡಕ್ಷನ್ ’ ಟಾಕ್ಸಿಕ್ ಚಿತ್ರವನ್ನು ನಿರ್ಮಿಸುತ್ತಿದೆ. ಮೂಲಗಳ ಪ್ರಕಾರ ಯಶ್ ಅವರ ‘ Monster Mind Creations’ ಕೂಡ ಈ ಚಿತ್ರಕ್ಕೆ ಹಣ ಹೂಡುತ್ತಿದೆ ಎನ್ನಲಾಗಿದ್ದು, ಇದೊಂದು ಕಂಟೆಂಟ್ ಆಧಾರಿತ ಚಿತ್ರ. ಅಷ್ಟೇ ಅಲ್ಲದೇ ಬಿಗ್ ಬಜೆಟ್ ಚಿತ್ರವೂ ಹೌದು ಎನ್ನಲಾಗುತ್ತಿದೆ.

ಟಾಕ್ಸಿಕ್ ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಇನ್ನೂ ಒಂದೂವರೆ ವರ್ಷ ಕಾಯಲೇಬೇಕು. ಚಿತ್ರತಂಡ ಹೇಳಿಕೊಂಡಿರುವ ಪ್ರಕಾರ 2025 ರ ಏಪ್ರಿಲ್ 10 ರಂದು ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂನಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.