ADVERTISEMENT

ರಾಯ Vs ಟಿಕೆಟ್: ಟಾಕ್ಸಿಕ್‌ನಲ್ಲಿ ಈ ಇಬ್ಬರ ಮಧ್ಯೆ ನಡೆಯಲಿದ್ಯಾ ಜಿದ್ದಾಜಿದ್ದಿ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಫೆಬ್ರುವರಿ 2026, 10:05 IST
Last Updated 21 ಫೆಬ್ರುವರಿ 2026, 10:05 IST
<div class="paragraphs"><p>ನಟ ಯಶ್</p></div>

ನಟ ಯಶ್

   

ನಟ ಯಶ್‌ ನಟನೆಯ ‘ಟಾಕ್ಸಿಕ್‌’ ಸಿನಿಮಾದ ಟೀಸರ್ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಟೀಸರ್‌ನಲ್ಲಿ ಒಂದು ಕಡೆ ರಾಯ, ಮತ್ತೊಂದು ಕಡೆ ಟಿಕೆಟ್‌ನಾ ಘರ್ಜನೆ ಜೋರಾಗಿದೆ. ನಿನ್ನೆ (ಫೆ.20) ಬಿಡುಗಡೆಯಾದ ಟೀಸರ್‌ನಲ್ಲಿ ಈ ಇಬ್ಬರ ಅಬ್ಬರ ಹೇಳತೀರದು.

ನಟ ಯಶ್

ADVERTISEMENT

ಇಷ್ಟು ದಿನ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ಈಗ ನಟ ಯಶ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಸಿನಿಮಾದಲ್ಲಿ ಯಶ್‌ ಅವರ ಎರಡನೇ ಪಾತ್ರದ ಹೆಸರನ್ನು ರಿವೀಲ್ ಮಾಡಲಾಗಿದೆ. ಈ ಹಿಂದೆ ಯಶ್ ಅವರ ಮೊದಲ ಪಾತ್ರದ ಹೆಸರನ್ನು ರಿವೀಲ್ ಮಾಡಿದ್ದರು. ಟೀಸರ್ ಬಿಡುಗಡೆಯಾಗಿ ಒಂದು ದಿನದ ಬಳಿಕ ಮತ್ತೊಂದು ಪಾತ್ರದ ಹೆಸರು ಹಾಗೂ ಲುಕ್‌ ಅನ್ನು ಅನಾವರಣ ಮಾಡಿದ್ದಾರೆ. ಅದರ ಜೊತೆಗೆ ‘ನಿಮ್ಮ 'ಟಿಕೆಟ್' ನರಕಕ್ಕೆ’ ಎಂದು ಅಡಿಬರಹ ಬರೆದುಕೊಂಡಿದ್ದಾರೆ.

ಈ ಮೂಲಕ ಸಿನಿಮಾದಲ್ಲಿ ರಾಯ ಹಾಗೂ ಟಿಕೆಟ್‌ ಇಬ್ಬರ ನಡುವೆ ಜಿದ್ದಾಜಿದ್ದಿ ನಡೆಯುವ ಸಾಧ್ಯತೆ ಇದ್ದು, ಈ ಎಲ್ಲಾ ಕುತೂಹಲಕ್ಕೆ ಮಾರ್ಚ್ 19ಕ್ಕೆ ತೆರೆ ಬಿಳಲಿದೆ. ಈ ಸಿನಿಮಾವನ್ನು ಗೀತು ಮೋಹನ್‌ದಾಸ್‌ ನಿರ್ದೇಶಿಸಿದ್ದಾರೆ. ನಯನತಾರಾ, ರುಕ್ಮಿಣಿ ವಸಂತ್‌, ಹುಮಾ ಖುರೇಷಿ, ಕಿಯಾರಾ ಅಡ್ವಾಣಿ ಹಾಗೂ ತಾರಾ ಅವರು ನಟಿಸಿದ್ದಾರೆ. ಈ ಸಿನಿಮಾ ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಾಣ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.