ADVERTISEMENT

ಬಾಲಿವುಡ್ ಬಿಟ್ಟು ಹೋಗಲು ನಿರ್ಧರಿಸಿದ್ದೆ: ನಟ ಅಮೀರ್ ಖಾನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಮಾರ್ಚ್ 2022, 5:16 IST
Last Updated 28 ಮಾರ್ಚ್ 2022, 5:16 IST
ಬಾಲಿವುಡ್ ನಟ ಅಮೀರ್ ಖಾನ್
ಬಾಲಿವುಡ್ ನಟ ಅಮೀರ್ ಖಾನ್   

ಬೆಂಗಳೂರು: ಬಾಲಿವುಡ್‌ನಲ್ಲಿ ‘ಮಿಸ್ಟರ್ ಪರ್ಫೆಕ್ಟ್‘ ಎಂದು ಕರೆಸಿಕೊಳ್ಳುವ ನಟ ಅಮೀರ್ ಖಾನ್, ಚಿತ್ರರಂಗ ತೊರೆಯಲು ನಿರ್ಧರಿಸಿದ್ದರಂತೆ..

ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಾನು ಸಿನಿಮಾ ಮತ್ತು ನನ್ನ ಕೆಲಸಗಳಿಗಾಗಿ ಜೀವನದ ಹೆಚ್ಚಿನ ಸಮಯ ಮೀಸಲಿರಿಸಿದೆ ಎನ್ನಿಸತೊಡಗಿತ್ತು. ಕುಟುಂಬಕ್ಕಾಗಿ ನಾನು ಹೆಚ್ಚು ಸಮಯ ಕೊಟ್ಟಿಲ್ಲ. ಹೀಗಾಗಿ ಬಾಲಿವುಡ್ ತೊರೆಯಲು ನಿರ್ಧರಿಸಿದ್ದೆ ಎಂದಿದ್ದಾರೆ.

ತಮ್ಮ ನಿರ್ಧಾರವನ್ನು ಅವರು ಮಾಜಿ ಪತ್ನಿ ಕಿರಣ್ ರಾವ್ ಮತ್ತು ಮಗಳು ಇರಾ ಖಾನ್ ಜತೆ ಚರ್ಚಿಸಿದಾಗ ಅವರು, ಸಿನಿಮಾ ಕ್ಷೇತ್ರದಲ್ಲಿಯೇ ಮುಂದುವರಿಯುವಂತೆ ಸಲಹೆ ನೀಡಿ, ನನ್ನ ಮನವೊಲಿಸಿದರು ಎಂದಿದ್ದಾರೆ.

ADVERTISEMENT

ಕುಟುಂಬದಲ್ಲಿ ನನ್ನ ಇರುವಿಕೆಯನ್ನು ಮಾಜಿ ಪತ್ನಿ ಮತ್ತು ಮಗಳು ತುಂಬಾ ಮಿಸ್ ಮಾಡಿಕೊಂಡಿರುತ್ತಾರೆ. ಅವರಿಗಾಗಿ ಸಮಯ ಕೊಡದಿರುವ ಬಗ್ಗೆ ನನಗೆ ಬೇಸರವಿದೆ ಎಂದು ಅಮೀರ್ ತಿಳಿಸಿದ್ದಾರೆ.

ಅಮೀರ್ ಖಾನ್ ಅಭಿನಯದ ‘ಲಾಲ್ ಸಿಂಗ್ ಛಡ್ಡಾ‘ ಚಿತ್ರ ತೆರೆಕಾಣಲು ಸಿದ್ಧವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.