ADVERTISEMENT

ಪುತ್ರಿ ಮತ್ತು ಪತಿಯ ಫೋಟೊ ಹಂಚಿಕೊಂಡು ಸಂಭ್ರಮಿಸಿದ ನಟಿ ಪ್ರಣೀತಾ ಸುಭಾಷ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜುಲೈ 2022, 7:34 IST
Last Updated 14 ಜುಲೈ 2022, 7:34 IST
ನಟಿ ಪ್ರಣೀತಾ ಸುಭಾಷ್
ನಟಿ ಪ್ರಣೀತಾ ಸುಭಾಷ್   

ಬೆಂಗಳೂರು: ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಅವರು ಕಳೆದ ಜೂನ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಉದ್ಯಮಿ ನಿತಿನ್ ರಾಜು ಜತೆ ಮದುವೆಯಾದ ಬಳಿಕ ಪ್ರಣೀತಾ ಅವರು ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ.

ಹೆಣ್ಣು ಮಗುವಿನ ಜನಿಸಿದ ಬಳಿಕ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಮಗುವಿನ ಬಗ್ಗೆ ಹೇಳಿಕೊಂಡಿದ್ದರು.

ADVERTISEMENT

ಈ ಬಾರಿ ಮಗುವನ್ನು ಹಿಡಿದುಕೊಂಡಿರುವ ಫೋಟೊ ಪೋಸ್ಟ್ ಮಾಡಿರುವ ಪ್ರಣೀತಾ ಅವರು, ಇವರಿಬ್ಬರೂ ನನ್ನ ಬೂ ಬೂಗಳು ಎಂದು ಅಡಿಬರಹ ನೀಡಿದ್ದಾರೆ.

ಪ್ರಣೀತಾ ಪತಿ ನಿತಿನ್ ರಾಜು ಕೂಡ ಫೋಟೊದಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಣೀತಾ ತಾಯಿ ಡಾ. ಜಯಶ್ರೀ ಅವರು ಸ್ತ್ರೀರೋಗ ತಜ್ಞೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.