ADVERTISEMENT

ಅಮೆರಿಕ ಪ್ರವಾಸದಲ್ಲಿ ದೀಪಿಕಾ ಪಡುಕೋಣೆ–ರಣವೀರ್ ಸಿಂಗ್: ಫೋಟೊ ವೈರಲ್

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅಮೆರಿಕ ಪ್ರವಾಸ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜುಲೈ 2022, 5:05 IST
Last Updated 14 ಜುಲೈ 2022, 5:05 IST
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್   

ಬೆಂಗಳೂರು: ಬಾಲಿವುಡ್‌ನ ಜನಪ್ರಿಯ ಜೋಡಿ ಮತ್ತು ಮೋಸ್ಟ್ ಸ್ಟೈಲಿಶ್ ಎಂದೇ ಹೆಸರು ಗಳಿಸಿರುವ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿ ಅಮೆರಿಕ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ.

ಪ್ರವಾಸದ ಕ್ಷಣಗಳ ವಿಡಿಯೊ ಮತ್ತು ಚಿತ್ರಗಳನ್ನು ದೀಪಿಕಾ, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದೊಂದು ಸಾಹಸಭರಿತ ಯಾತ್ರೆಯಾಗಿದ್ದು, ಪ್ರವಾಸದಲ್ಲಿ ವಿವಿಧ ತಾಣಗಳಿಗೆ ಭೇಟಿ ನೀಡಿದ್ದೇವೆ. ಅಲ್ಲದೆ, ರೋಮಾಂಚನಕಾರಿ ಕ್ಷಣಗಳನ್ನು ಕಳೆದಿದ್ದೇವೆ ಎಂದು ದೀಪಿಕಾ ಹೇಳಿಕೊಂಡಿದ್ದಾರೆ.

ADVERTISEMENT

ಅಮೆರಿಕದಲ್ಲಿ ಬೆಟ್ಟ–ಗುಡ್ಡ, ರೋಡ್ ಟ್ರಿಪ್, ಕ್ಯಾಂಪ್, ಬೀಚ್ ಹೀಗೆಲ್ಲ ವಿವಿಧ ತಾಣಗಳಿಗೆ ದೀಪಿಕಾ ಮತ್ತು ರಣವೀರ್ ಜೋಡಿ ಭೇಟಿ ನೀಡಿದ್ದಾರೆ.

ರಣವೀರ್ ಸಿಂಗ್ ಅವರ ಜನ್ಮದಿನದ ಆಚರಣೆಗಾಗಿ ಈ ಜೋಡಿ ಅಮೆರಿಕ ಪ್ರವಾಸ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.