ADVERTISEMENT

OTTಯಲ್ಲಿ ಸಿನಿಮಾ ಹಬ್ಬ: ಈ ವಾರ ಯಾವೆಲ್ಲ ಚಿತ್ರ ಬಿಡುಗಡೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜನವರಿ 2025, 15:48 IST
Last Updated 15 ಜನವರಿ 2025, 15:48 IST
   

ಬೆಂಗಳೂರು: ಸಂಕ್ರಾಂತಿ ಮುಗಿಯುತ್ತಲೇ ಒಟಿಟಿಯಲ್ಲೂ ಸಿನಿಮಾಗಳ ಹಬ್ಬ ಆರಂಭವಾಗಿದೆ. ಕ್ರೈಮ್‌, ಥ್ರಿಲ್ಲರ್‌ ಸಿನಿಮಾಗಳೇ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿವೆ. 

ಒಟಿಟಿಯಲ್ಲಿ ಇತ್ತೀಚೆಗೆ ಬಿಡುಗಡೆಯಾದ ಇಂಟ್ರಸ್ಟಿಂಗ್‌ ಸಿನಿಮಾಗಳ ಪೈಕಿ ಮಲಯಾಳಂನ ‘ಸೂಕ್ಷ್ಮದರ್ಶಿನಿ’ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಈ ಸಿನಿಮಾ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಗೊಂಡಿದೆ. 

ಇದನ್ನು ಹೊರತುಪಡಿಸಿ ಜೀ 5ನಲ್ಲಿ ಬಿಡುಗಡೆಯಾದ ಹಿಂದಿಯ ‘ಸಬರಮತಿ ರಿಪೋರ್ಟ್‌’ ಹಾಗೂ ಅಮೇಜಾನ್‌ ಪ್ರೈಮ್‌ನಲ್ಲಿ ರಿಲೀಸ್‌ ಆದ ‘ಮಿಸ್‌ ಯು’ ಚಿತ್ರ ಜನರನ್ನು ಸೆಳೆದಿವೆ. ಅದರಲ್ಲೂ ಮಿಸ್‌ ಯೂ ಚಿತ್ರದಲ್ಲಿ ಚಂದನವನದ ನಟಿ ಆಶಿಕಾ ರಂಗನಾಥ್‌ ಕಾಣಿಸಿಕೊಂಡಿರುವುದು ಕನ್ನಡಿಗರಿಗೆ ಹೆಚ್ಚು ಕುತೂಹಲ ಮೂಡಿಸಿದೆ. 

ADVERTISEMENT

ಈ ವಾರ ಬಿಡುಗಡೆಯಾಗುವ ಸಿನಿಮಾಗಳು

‘ಪಾತಾಳ್ ಲೋಕ ಸೀಸನ್‌ –2’

ಜ.17ಕ್ಕೆ ಅಮೇಜಾನ್‌ ಪ್ರೈಮ್‌ನಲ್ಲಿ ‘ಪಾತಾಳ್ ಲೋಕ ಸೀಸನ್‌ –2’ ರಿಲೀಸ್‌ ಆಗುತ್ತಿದೆ. ಇದು ಥ್ರಿಲ್ಲರ್‌ ವೆಬ್‌ಸಿರೀಸ್‌ ಆಗಿದ್ದು, ನಾಗಾಲ್ಯಾಂಡ್‌ನಲ್ಲಿ ನಡೆದ ಕೊಲೆಯ ಸುತ್ತ ಕಥಾಹಂದರ ಇರಲಿದೆ.

ಚಿಡಿಯಾ ಉಡ್‌

ಜಾಕಿ ಶ್ರಾಫ್‌, ಭೂಮಿಕಾ ಮೀನಾ ಮತ್ತು ಸಿಕಂದರ್‌ ಖೇರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ಅಮೇಜಾನ್‌ ಪ್ರೈಮ್‌ನಲ್ಲಿ ಜ.15ರಿಂದ ವೀಕ್ಷಣೆಗೆ ಸಿಗುತ್ತಿದೆ.

ವಿದುತಲೈ ಭಾಗ –2

ಜ.17ರಿಂದ ಈ ಚಿತ್ರ ಜೀ 5ನಲ್ಲಿ ವೀಕ್ಷಣೆಗೆ ಸಿಗಲಿದೆ. ತಮಿಳಿನ ಈ ಆಕ್ಷನ್‌ ಚಿತ್ರದಲ್ಲಿ ವಿಜಯ್‌ ಸೇತುಪತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ವಿದತಲೈ ಚಿತ್ರದ ಎರಡನೇ ಭಾಗವಾಗಿದೆ.

ಪಾನಿ

ಜ.16 ರಿಂದ ಸೋನಿ ಲೈವ್‌ನಲ್ಲಿ ಮಲಯಾಳಂನ ಈ ಚಿತ್ರ ನೋಡಬಹುದು. ಜೋಜು ಜಾರ್ಜ್‌ ನಿರ್ದೇಶಿಸಿ ನಟಿಸಿರುವ ಪಾನಿ ಚಿತ್ರ ಥ್ರಿಲ್ಲರ್‌ ಜಾನರ್‌ದ್ದಾಗಿದೆ. ಜೋಜು ಅವರ ಚೊಚ್ಚಲ ನಿರ್ದೇಶನದಲ್ಲಿ ಪಾನಿ ಸಿನಿಮಾ ನಿರ್ಮಾಣಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.