ADVERTISEMENT

ಜೈ, ದಿ ರಾಜಾ ಸಾಬ್, ಪರಾಶಕ್ತಿ.. ಈ ವಾರ ಒಟಿಟಿಯಲ್ಲಿ ತೆರೆಕಾಣಲಿರುವ ಸಿನಿಮಾಗಳಿವು

Sanjay G M
Published 4 ಫೆಬ್ರುವರಿ 2026, 6:52 IST
Last Updated 4 ಫೆಬ್ರುವರಿ 2026, 6:52 IST
   

ನೆಟ್‌ಫ್ಲಿಕ್ಸ್‌, ಜಿಯೋ ಹಾಟ್‌ಸ್ಟಾರ್‌, ಅಮೆಜಾನ್‌ ಪ್ರೈಮ್‌ ಸೇರಿದಂತೆ ಪ್ರಮುಖ ಒಟಿಟಿ ವೇದಿಕೆಗಳಲ್ಲಿ ಈ ವಾರ(ಫೆ.1–ಫೆ.7) ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿವೆ.

ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಬೇರೆ ಬೇರೆ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ, ನೋಡಲೇಬೇಕಾದ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.

ಈ ವಾರ ಬಿಡುಗಡೆಯಾಗುತ್ತಿರುವ ಸಿನಿಮಾಗಳು

ಸಿನಿಮಾ: ದಿ ರಾಜಾ ಸಾಬ್

ADVERTISEMENT

ಭಾಷೆ: ತೆಲುಗು

ಒಟಿಟಿ: ಜಿಯೋ ಹಾಟ್‌ಸ್ಟಾರ್‌

ಬಿಡುಗಡೆ ದಿನಾಂಕ: ಫೆ.6

ಟಾಲಿವುಡ್‌ ಪ್ರಮುಖ ನಟ ಪ್ರಭಾಸ್ ಅಭಿನಯದ ಕಾಮಿಡಿ–ಹಾರರ್ ಚಲನಚಿತ್ರ ‘ದಿ ರಾಜಾ ಸಾಬ್’, ಫೆ.6ರಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ ತೆಲುಗು, ತಮಿಳು, ಮಲಯಾಳ, ಕನ್ನಡ ಭಾಷೆಯಲ್ಲಿ ಲಭ್ಯವಿದೆ. ಪ್ರಭಾಸ್, ಮಾಳವಿಕಾ ಮೋಹನನ್, ರಿದ್ಧಿ ಕುಮಾರ್, ನಿಧಿ ಅಗರ್ವಾಲ್, ಸಂಜಯ್ ದತ್, ಯೋಗಿ ಬಾಬು, ಕಿಯಾರಾ ಅಡ್ವಾಣಿ, ಬ್ರಹ್ಮಾನಂದಂ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮಾರುತಿ ಚಿತ್ರವನ್ನು ನಿರ್ದೇಶಿಸಿದ್ದು, ಸಿನಿಮಾವು 2026ರ ಜ.9ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಚಿತ್ರವು 3 ಗಂಟೆ, 10 ನಿಮಿಷಗಳ ಅವಧಿಯಿದೆ.

ಸಿನಿಮಾ: ಜೈ

ಭಾಷೆ: ತುಳು, ಕನ್ನಡ

ಒಟಿಟಿ: ಜೀ 5

ಬಿಡುಗಡೆ ದಿನಾಂಕ: ಫೆ.6

ಬಿಗ್‌ಬಾಸ್‌ 9ನೇ ಸೀಸನ್ ವಿಜೇತರಾಗಿರುವ ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಮಿಡಿ – ಡ್ರಾಮಾ ಸಿನಿಮಾ ‌‘ಜೈ’ ಫೆ.6ಕ್ಕೆ ಜೀ 5 ಒಟಿಟಿಗೆ ಎಂಟ್ರಿ ಕೊಡಲಿದೆ. ತುಳು ಮತ್ತು ಕನ್ನಡ ಭಾಷೆಯಲ್ಲಿ ಲಭ್ಯವಿದೆ. ಈ ಸಿನಿಮಾದಲ್ಲಿ ಅದ್ವಿತಿ ಶೆಟ್ಟಿ, ಸುನೀಲ್ ಶೆಟ್ಟಿ, ಡಾ ದೇವದಾಸ್ ಕಾಪಿಕಾಡ್, ರಾಜ್ ದೀಪಕ್ ಶೆಟ್ಟಿ, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್ ಮನೋಜ್ ಚೇತನ್ ಡಿ ಸೋಜ ಇನ್ನಿತರರು ಅಭಿನಯಿಸಿದ್ದಾರೆ.

ಸಿನಿಮಾ: ನಾರಿ ನಾರಿ ನಡುಮ ಮುರಾರಿ

ಭಾಷೆ: ತೆಲುಗು

ಒಟಿಟಿ: ಅಮೆಜಾನ್‌ ಪ್ರೈಮ್‌

ಬಿಡುಗಡೆ ದಿನಾಂಕ: ಫೆ.4

ಟಾಲಿವುಡ್‌ನ ರೋಮ್ಯಾಂಟಿಕ್ – ಕಾಮಿಡಿ ಚಲನಚಿತ್ರ ‘ನಾರಿ ನಾರಿ ನಡುಮ ಮುರಾರಿ’ ಫೆ.4ರಿಂದ ಅಮೆಜಾನ್‌ ಪ್ರೈಮ್‌ ಅಲ್ಲಿ ಬಿಡುಗಡೆಯಾಗಲಿದೆ. ತೆಲುಗು, ತಮಿಳು, ಮಲಯಾಳ, ಕನ್ನಡ, ಹಿಂದಿ ಭಾಷೆಗಳಲ್ಲಿ ಒಟಿಟಿ ಅಲ್ಲಿ ತೆರೆಕಾಣಲಿದೆ. ಚಿತ್ರವು ತ್ರಿಕೋನ ಪ್ರೇಮಕತೆಯನ್ನು ಹೊಂದಿದ್ದು, ತನ್ನ ಹಿಂದೆ ಬೀಳುವ ಇಬ್ಬರು ಹುಡುಗಿಯರನ್ನು ನಾಯಕ ಹೇಗೆ ಸಂಬಾಳಿಸುತ್ತಾನೆ ಎನ್ನುವುದೇ ಚಿತ್ರಕತೆ. ರಾಮ್ ಅಬ್ಬರಾಜು ಚಿತ್ರವನ್ನು ನಿರ್ದೇಶಿಸಿದ್ದಾರೆ. ಶರ್ವಾನಂದ್, ಸಾಕ್ಷಿ ವೈದ್ಯ, ಸಂಯುಕ್ತಾ ಮೆನನ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಜ.14ರಂದು ಸಿನಿಮಾವು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡುವಲ್ಲಿ ವಿಫಲವಾಗಿತ್ತು. ಚಿತ್ರವು 160 ನಿಮಿಷಗಳ ಅವಧಿಯಿದೆ.

ಸಿನಿಮಾ: ಪರಾಶಕ್ತಿ

ಭಾಷೆ: ತಮಿಳು

ಒಟಿಟಿ: ಜೀ 5

ಬಿಡುಗಡೆ ದಿನಾಂಕ: ಫೆ.7

ರಾಜಕೀಯ ಕಥಾಹಂದರ ಹೊಂದಿರುವ ತಮಿಳಿನ ‘ಪರಾಶಕ್ತಿ’ ಸಿನಿಮಾವು ಫೆ.7ರಿಂದ ಜೀ 5 ಒಟಿಟಿ ಅಲ್ಲಿ ಲಭ್ಯವಿದೆ. ‘ಪರಾಶಕ್ತಿ’ ಚಿತ್ರವು 1965ರಲ್ಲಿ ತಮಿಳುನಾಡಿನಲ್ಲಿ ನಡೆದ ನೈಜ ಘಟನೆಯಾಧಾರಿತವಾಗಿದೆ. ಸುಧಾ ಕೊಂಗರ ಪ್ರಸಾದ್ ಅವರು ಚಿತ್ರವನ್ನು ನಿರ್ದೇಶಿಸಿದ್ದಾರೆ. ಶಿವಕಾರ್ತಿಕೇಯನ್, ಶ್ರೀಲೀಲಾ, ರವಿ ಮೋಹನ್, ಅಥರ್ವ, ರಾಣಾ ದಗ್ಗುಬಾಟಿ, ಬೆಸಿಲ್ ಜೋಸೆಫ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವು 2026ರ ಜ.10ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಚಿತ್ರವು 2 ಗಂಟೆ, 42 ನಿಮಿಷಗಳ ಅವಧಿಯಿದೆ.

ಸಿನಿಮಾ: ಸೈಕ್ ಸಿದ್ಧಾರ್ಥ

ಭಾಷೆ: ತೆಲುಗು

ಒಟಿಟಿ: ಆಹಾ (Aha)ಒಟಿಟಿ

ಬಿಡುಗಡೆ ದಿನಾಂಕ: ಫೆ.4

ಟಾಲಿವುಡ್‌ನ ರೋಮ್ಯಾಂಟಿಕ್ – ಕಾಮಿಡಿ ಚಲನಚಿತ್ರ ‘ಸೈಕ್ ಸಿದ್ಧಾರ್ಥ’ ಫೆ.4ರಿಂದ ಒಟಿಟಿ ಅಲ್ಲಿ ಬಿಡುಗಡೆಯಾಗಲಿದೆ. ಅದೃಷ್ಟವಿಲ್ಲದೇ ಕಾಲಿಟ್ಟಲೆಲ್ಲಾ ಅನಾಹುತಗಳನ್ನು ಮಾಡಿಕೊಳ್ಳುವ ನಾಯಕನು ನಾಯಕಿಯನ್ನು ಭೇಟಿಯಾದ ನಂತರ ಏನಾಗುತ್ತದೆ ಎನ್ನುವುದೇ ಚಿತ್ರಕತೆ. ಸಿನಿಮಾವನ್ನು ವರುಣ್ ರೆಡ್ಡಿ ನಿರ್ದೇಶಿಸಿದ್ದಾರೆ. ಯಾಮಿನಿ ಭಾಸ್ಕರ್‌, ಶ್ರೀನಂದು ಜೋಡಿಯಾಗಿ ನಟಿಸಿದ್ದಾರೆ. ಜ.1ರಂದು ಸಿನಿಮಾವು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಚಿತ್ರವು 120 ನಿಮಿಷಗಳ ಅವಧಿಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.