ADVERTISEMENT

OTT: ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾ ಹಾಗೂ ವೆಬ್‌ ಸರಣಿಗಳಿವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಡಿಸೆಂಬರ್ 2025, 10:37 IST
Last Updated 17 ಡಿಸೆಂಬರ್ 2025, 10:37 IST
   

ಬೆಂಗಳೂರು: ನೆಟ್‌ಫ್ಲಿಕ್ಸ್‌, ಜಿಯೋ ಹಾಟ್‌ಸ್ಟಾರ್‌, ಅಮೆಜಾನ್‌ ಪ್ರೈಮ್‌ ಸೇರಿದಂತೆ ಪ್ರಮುಖ ಒಟಿಟಿ ವೇದಿಕೆಗಳಲ್ಲಿ ಈ ವಾರ ಹಲವು ಸಿನಿಮಾ ಹಾಗೂ ವೆಬ್‌ ಸರಣಿಗಳ ಬಿಡುಗಡೆಯಾಗುತ್ತಿವೆ.

ಈ ವಾರ ಬಿಡುಗಡೆಯಾಗುತ್ತಿರುವ ಸಿನಿಮಾಗಳು

ಸಿನಿಮಾ: ಡೊಮಿನಿಕ್ ಆ್ಯಂಡ್ ದಿ ಲೇಡಿಸ್ ಪರ್ಸ್

ಭಾಷೆ: ಮಲಯಾಳ

ADVERTISEMENT

ಒಟಿಟಿ: ಜೀ 5

ಬಿಡುಗಡೆ ದಿನಾಂಕ: ಡಿಸೆಂಬರ್‌ 19

ಮಲಯಾಳ ಸ್ಟಾರ್‌ ನಟ ಮುಮುಟ್ಟಿ ಅಭಿನಯದ ಕಾಮಿಡಿ ಥ್ರಿಲ್ಲರ್ ಸಿನಿಮಾ 'ಡೊಮಿನಿಕ್ ಆ್ಯಂಡ್ ದಿ ಲೇಡಿಸ್ ಪರ್ಸ್' 2025ರ ಜನವರಿಯಲ್ಲಿ ತೆರೆಕಂಡಿತ್ತು. ಬಾಕ್ಸ್‌ ಆಫೀಸ್‌ ಗಳಿಕೆಯಲ್ಲಿ ಹಿಂದೆ ಉಳಿದಿದ್ದ ಈ ಸಿನಿಮಾ, ಬಿಡುಗಡೆಯಾಗಿ 11 ತಿಂಗಳ ನಂತರ ಒಟಿಟಿಗೆ ಬರುತ್ತಿದೆ. ಸಿನಿಮಾದಲ್ಲಿ ಮುಮುಟ್ಟಿ ಮಾಜಿ ಪೊಲೀಸ್‌ ಅಧಿಕಾರಿಯಾಗಿದ್ದು, ನಂತರ ಖಾಸಗಿ ಪತ್ತೆದಾರನಾಗಿ ಪ್ರಕರಣವೊಂದರ ಪತ್ತೆದಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾ: ರಾಜು ವೆಡ್ಸ್‌ ರಂಬಾನಿ

ಭಾಷೆ: ತೆಲುಗು

ಒಟಿಟಿ: ಈಟಿವಿ ವಿನ್

ಬಿಡುಗಡೆ ದಿನಾಂಕ: ಡಿಸೆಂಬರ್‌ 18

'ರಾಜು ವೆಡ್ಸ್‌ ರಂಬಾನಿ' ಚಿತ್ರವು ಪ್ರೇಮ ಕಥೆಯಾಧಾರಿತ ಚಲನಚಿತ್ರವಾಗಿದ್ದು, 2010ರಲ್ಲಿ ತೆಲಂಗಾಣದ ಗ್ರಾಮವೊಂದರಲ್ಲಿ ನಡೆದ ನೈಜ ಘಟನೆಯಾಧಾರಿತ ಚಲನಚಿತ್ರವಾಗಿದೆ. ಈ ಸಿನಿಮಾವು ನವೆಂಬರ್‌ 21ರಂದು ಬಿಡುಗಡೆಗೊಂಡಿತ್ತು. ಅಖಿಲ್ ರಾಜ್ ಉದ್ದೇಮರಿ & ತೇಜಸ್ವಿ ರಾವ್ ಮುಖ್ಯಭೂಮಿಕೆಯಲ್ಲಿದ್ದಾರೆ. ಸಿನಿಮಾವನ್ನು ಸೈಲು ಕಾಂಪತಿ ಅವರು ನಿರ್ದೇಶಿಸಿದ್ದಾರೆ.

ಸಿನಿಮಾ: ಅನ್ ಪರ್ವಯಿಲ್

ಭಾಷೆ: ತಮಿಳು

ಒಟಿಟಿ: ಸನ್‌ ನೆಕ್ಸ್ಟ್‌

ಬಿಡುಗಡೆ ದಿನಾಂಕ: ಡಿಸೆಂಬರ್‌ 19

ಪಾರ್ವತಿ ನಾಯರ್‌ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ಕ್ರೈಂ, ಥ್ರಿಲ್ಲರ್‌ ಸಿನಿಮಾ 'ಅನ್ ಪರ್ವಯಿಲ್' ಅನ್ನು ಕಬೀರ್‌ ಲಾಲ್ ನಿರ್ದೇಶಿಸಿದ್ದು, ಡಿಸೆಂಬರ್‌ 19 ಸನ್‌ನೆಕ್ಸ್ಟ್‌ ಒಟಿಟಿಯಲ್ಲಿ ನೇರ ಬಿಡುಗಡೆಯಾಗಲಿದೆ. ಕಣ್ಣು ಕಾಣದ ಮಹಿಳೆಯೊಬ್ಬಳು ತನ್ನ ಗಂಡ ಹಾಗೂ ಸಹೋದರಿಯರ ಸಾವಿನ ತನಿಖೆಯಲ್ಲಿ ಕಂಡುಕೊಳ್ಳುವ ಕುತೂಹಲಕಾರಿ ಘಟನೆಗಳ ಸುತ್ತ ಚಿತ್ರಕತೆ ಸಾಗುತ್ತದೆ.

ವೆಬ್‌ ಸರಣಿ: ಮಿಸ್‌. ದೇಶಪಾಂಡೆ

ಭಾಷೆ: ಹಿಂದಿ

ಒಟಿಟಿ: ಜಿಯೋ ಹಾಟ್‌ಸ್ಟಾರ್

ಬಿಡುಗಡೆ ದಿನಾಂಕ: ಡಿಸೆಂಬರ್‌ 19

ಹಿರಿಯ ನಟಿ ಮಾಧುರಿ ದೀಕ್ಷಿತ್‌ ಅಭಿನಯದ ಸೈಕೋಲಾಜಿಕಲ್‌ ಥ್ರಿಲ್ಲರ್ ವೆಬ್‌ ಸರಣಿ ‘ಮಿಸ್‌. ದೇಶಪಾಂಡೆ’, ಸೀರಿಯಲ್‌ ಕಿಲ್ಲರ್‌ ಗೃಹಿಣಿಯ ಸುತ್ತ ಚಿತ್ರದ ಕತೆ ಸಾಗುತ್ತದೆ. ವೆಬ್‌ ಸರಣಿಯ ಚಿತ್ರಕತೆಯು ಪ್ರೆಂಚ್‌ ಸರಣಿ ‘ಲ ಮಂಟೆ’ಯಿಂದ ಪ್ರೇರಣೆ ಪಡೆದಿದ್ದು, ನಾಗೇಶ್ ಕುಕುನೂರ್ ನಿರ್ದೇಶಿಸಿದ್ದಾರೆ. ಒಟ್ಟು 6 ಎಪಿಸೋಡ್‌ಗಳಿವೆ.

ವೆಬ್‌ ಸರಣಿ: ನಯನಂ

ಭಾಷೆ: ತೆಲುಗು

ಒಟಿಟಿ: ಜೀ 5

ಬಿಡುಗಡೆ ದಿನಾಂಕ: ಡಿಸೆಂಬರ್‌ 19

ಸೈಂಟಿಫಿಕ್‌ ಫಿಕ್ಷನ್ ಹಾಗೂ ಥ್ರಿಲ್ಲರ್‌ ವೆಬ್‌ ಸರಣಿ ‘ನಯನಂ’ ಅಲ್ಲಿ ವರುಣ್‌ ಸಂದೇಶ್‌ ಹಾಗೂ ಪ್ರಿಯಾಂಕ ಎಮ್‌. ಜೈನ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ನೇತ್ರಶಾಸ್ತ್ರಜ್ಞ ಒಬ್ಬರ ನಿಗೂಢ ಸಂಶೋಧನೆಯೊಂದರಿಂದ ಬಹಿರಂಗಗೊಳ್ಳುವ ವಿಚಿತ್ರ ಸಂಗತಿಗಳ ಸುತ್ತಾ ಸರಣಿ ಸಾಗುತ್ತದೆ. ಒಟ್ಟು 6 ಎಪಿಸೋಡ್‌ಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.