ADVERTISEMENT

OTTಗೆ ರಶ್ಮಿಕಾ ಮಂದಣ್ಣ ನಟನೆಯ ‘ಥಮ್ಮ’ ಲಗ್ಗೆ; ಎಲ್ಲಿ ನೋಡಬಹುದು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಡಿಸೆಂಬರ್ 2025, 10:42 IST
Last Updated 19 ಡಿಸೆಂಬರ್ 2025, 10:42 IST
<div class="paragraphs"><p>ಥಮ್ಮ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ</p></div>

ಥಮ್ಮ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ

   

ಚಿತ್ರ:@PrimeVideoIN

ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಹಾರರ್ ಥ್ರಿಲ್ಲರ್ ಸಿನಿಮಾ ಥಮ್ಮಾ ಒಟಿಟಿ ವೇದಿಕೆಗೆ ಬಂದಿದೆ. ಈ ಸಿನಿಮಾ ಡಿಸೆಂಬರ್ 16ರಿಂದಲೇ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದ್ದು, ಈ ಬಗ್ಗೆ ಅಮೇಜಾನ್ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ.

ADVERTISEMENT

ಸಿನಿಮಾದಲ್ಲಿ ಹಾರರ್, ಹಾಸ್ಯ ಹಾಗೂ ರೋಮ್ಯಾನ್ಸ್ ಇದ್ದು, ಪ್ರೇಕ್ಷಕರನ್ನು ರಂಜಿಸಲಿದೆ. ರಶ್ಮಿಕಾ ಮಂದಣ್ಣ ಹಾಗೂ ಆಯುಷ್ಮಾನ್ ಖುರಾನಾ ಅಭಿನಯದ ಥಮ್ಮಾ ಸಿನಿಮಾ ಅಕ್ಟೋಬರ್ 21ರಂದು ರಿಲೀಸ್ ಆಗಿ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿತ್ತು.

ಇತ್ತೀಚೆಗೆ ಬಿಡುಗಡೆಯಾದ ಗರ್ಲ್‌ಫ್ರೆಂಡ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಕಾಲೇಜು ವಿದ್ಯಾರ್ಥಿನಿ ಪಾತ್ರ ನಿರ್ವಹಿಸಿ ಯಶಸ್ವಿಯಾಗಿದ್ದರು. ಆದರೆ, ಥಮ್ಮ ಸಿನಿಮಾದಲ್ಲಿ ರಶ್ಮಿಕಾ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಹಾರರ್ ಕಂಟೆಂಟ್ ಇರುವುದರಿಂದ ರಶ್ಮಿಕಾ ಮಂದಣ್ಣ ಸಿನಿಮಾದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡು ಪಾತ್ರಕ್ಕೆ ಜೀವ ತುಂಬಿದ್ದಾರೆ.

ರಶ್ಮಿಕಾ ಮಂದಣ್ಣ ತಮ್ಮ ಪಾತ್ರವನ್ನು ಸಲೀಸಾಗಿ ನಿರ್ವಹಿಸಿದ್ದಾರೆ. ಇತ್ತೀಚೆನ ದಿನಗಳಲ್ಲಿ ಹಿಂದಿಯಲ್ಲಿ ನಾಯಕಿಯರಿಗೆ ಇಷ್ಟೊಂದು ಪ್ರಾಮುಖ್ಯತೆ ಇರುವ ಪಾತ್ರ ಸಿಗುತ್ತಿಲ್ಲ. ಆದರೆ, ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ರಶ್ಮಿಕಾ ಯಶಸ್ವಿಯಾಗಿದ್ದಾರೆ. ಇನ್ನು ನವಾಜುದ್ದೀನ್ ಸಿದ್ದಿಕಿ ತಮ್ಮ ಅಭಿನಯದಿಂದ ಪ್ರೇಕ್ಷಕರನ್ನು ನಕ್ಕು ನಗಿಸಿದ್ದಾರೆ.