ADVERTISEMENT

ಗೆಳೆಯನ ಜತೆ ಕಾರಿನಲ್ಲಿ ತೆರಳಿದ ಸುಹಾನಾ ಖಾನ್: ಫೋಟೊ ವೈರಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಮಾರ್ಚ್ 2022, 8:27 IST
Last Updated 23 ಮಾರ್ಚ್ 2022, 8:27 IST
ಸುಹಾನಾ ಮತ್ತು ಅವರ ಗೆಳೆಯ- (ಚಿತ್ರ– ವೈರಲ್ ಭಯಾನಿ)
ಸುಹಾನಾ ಮತ್ತು ಅವರ ಗೆಳೆಯ- (ಚಿತ್ರ– ವೈರಲ್ ಭಯಾನಿ)   

ಬೆಂಗಳೂರು: ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ಗೌರಿ ಖಾನ್ ದಂಪತಿ ಪುತ್ರಿ ಸುಹಾನಾ ಖಾನ್, ಸಾಮಾಜಿಕ ತಾಣಗಳಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ.

ಬಾಲಿವುಡ್‌ನ ಸ್ಟಾರ್ ಕುಟುಂಬದ ಹಿನ್ನೆಲೆಯೂ ಇರುವುದರಿಂದ, ಅವರ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಿದೆ.

ಸುಹಾನಾ ಖಾನ್ ಅವರು ನ್ಯೂಯಾರ್ಕ್ ಮತ್ತು ಲಂಡನ್‌ನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದು, ಸಿನಿಮಾ ಪ್ರವೇಶಕ್ಕೆ ತಯಾರಿ ನಡೆಸುತ್ತಿದ್ದಾರೆ.

ADVERTISEMENT

ಅವರು ಗೆಳೆಯನೊಬ್ಬನ ಜತೆ ಹೊರಗಡೆ ಸುತ್ತಾಡಲು ಕಾರಿನಲ್ಲಿ ತೆರಳಿದ್ದು, ಈ ಸಂದರ್ಭದಲ್ಲಿ ಅಭಿಮಾನಿಗಳು ಅವರ ಫೋಟೊ ಕ್ಲಿಕ್ಕಿಸಿ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಆದರೆ, ಕ್ಯಾಮೆರಾ ಕಂಡ ಕೂಡಲೇ, ಸುಹಾನಾ ಮತ್ತು ಅವರ ಗೆಳೆಯ ಮುಖಕ್ಕೆ ಕೈ ಅಡ್ಡ ಹಿಡಿದುಕೊಂಡಿದ್ದಾರೆ. ಅವರ ಫೋಟೊಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ವೈರಲ್ ಭಯಾನಿ ಅವರು ಫೋಟೊಗಳನ್ನು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.