ADVERTISEMENT

ಸೆಲೆಬ್ರಿಟಿ ಲೈವ್ | ದೊಡ್ಡ ಬ್ಯಾನರ್‌ ದೊಡ್ಡ ಸ್ಟಾರ್‌ ಇದ್ರೆ ಸಿನಿಮಾ ಓಡಲ್ಲ: ನಟ ರಿಷಿ

ಪ್ರಜಾವಾಣಿ ವಿಶೇಷ
Published 4 ಜೂನ್ 2023, 4:48 IST
Last Updated 4 ಜೂನ್ 2023, 4:48 IST

ಕನ್ನಡ ಚಿತ್ರರಂಗದಲ್ಲಿ ತಮ್ಮ ಅಭಿನಯದ ಮೂಲಕವೇ ಗುರುತಿಸಿಕೊಂಡಿರುವ ನಟ ರಿಷಿ. ಕಿರುತೆರೆಯಿಂದ ಹಿರಿತೆರೆಗೆ ಬಂದಂತಹ ನಟ ರಿಷಿಗೆ ಸಿನಿಮಾ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಆಪರೇಷನ್‌ ಅಲಮೇಲಮ್ಮ ಚಿತ್ರದ ಮೂಲಕ ತಾವೂ ಕೂಡ ಒಬ್ಬ ಪ್ರತಿಭಾವಂತ ನಟ ಎಂಬುದನ್ನು ಸಾಬೀತು ಪಡಿಸಿದರು. ಆ ಚಿತ್ರ ಯಾರೂ ನಿರೀಕ್ಷೆ ಮಾಡಿರಲಿಲ್ಲ ಅಷ್ಟು ದೊಡ್ಡ ಮಟ್ಟದ ಯಶಸ್ಸು ತಂದು ಕೊಟ್ಟಿತ್ತು. ನಂತರದಲ್ಲಿ ಮಾಡಿದ ಚಿತ್ರಗಳುಕೂಡ ತಕ್ಕಮಟ್ಟಿಗೆ ಹೆಸರು ಮಾಡಿದರು ಕೂಡ ಹಿಟ್‌ ಸಿನಿಮಾ ನೀಡಿಲ್ಲ ಎನ್ನುವ ಕೊರಗು ರಿಷಿಗೆ ಇದೆ. ಇನ್ನು ರಿಷಿ ಅಭಿನಯದ ರಾಮನ ಅವತಾರ ಸಿನಿಮಾ ದೊಡ್ಡಮಟ್ಟದಲ್ಲಿ ಹಿಟ್‌ ಆಗುತ್ತದೆ ಎನ್ನುವ ನಿರೀಕ್ಷೆಯನ್ನು ರಿಷಿ ಇಟ್ಟುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.