ADVERTISEMENT

ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೊ ಹಂಚಿಕೊಂಡ ನಟಿ ದೀಪಿಕಾ ದಾಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಫೆಬ್ರುವರಿ 2026, 10:53 IST
Last Updated 16 ಫೆಬ್ರುವರಿ 2026, 10:53 IST
<div class="paragraphs"><p>ಪತಿ ದೀಪಕ್‌ ಅವರೊಂದಿಗೆ&nbsp;ನಟಿ ದೀಪಿಕಾ ದಾಸ್</p></div>

ಪತಿ ದೀಪಕ್‌ ಅವರೊಂದಿಗೆ ನಟಿ ದೀಪಿಕಾ ದಾಸ್

   

ಚಿತ್ರ: ಇನ್‌ಸ್ಟಾಗ್ರಾಂ

ನಾಗಿಣಿ ಧಾರಾವಾಹಿ​​ ಮೂಲಕ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದ ನಟಿ ದೀಪಿಕಾ ದಾಸ್ ಪತಿ ಜೊತೆಗೆ ಪ್ರೇಮಿಗಳ ದಿನಾಚರಣೆಯನ್ನು ಆಚರಿಸಿದ್ದಾರೆ.

ADVERTISEMENT

ಪತಿ ದೀಪಕ್‌ ಜೊತೆಗೆ ವ್ಯಾಲೆಂಟೈನ್ಸ್‌ ಡೇ ಆಚರಿಸಿದ ನಟಿ ದೀಪಿಕಾ ದಾಸ್ ಅದೇ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡದ​ ಬಿಗ್​ಬಾಸ್ ಶೋ ​ಸೀಸನ್​ 7 ಹಾಗೂ 9ಕ್ಕೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ದೀಪಿಕಾ ದಾಸ್ 2024ರ ಮಾರ್ಚ್ 1ರಂದು ಗೋವಾದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾದರು.

ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮೂಲಕ ಬಹುಕಾಲದ ಗೆಳೆಯನ ಜೊತೆಗೆ ಸಪ್ತಪದಿ ತುಳಿದಿದ್ದರು. ಮದುವೆ ಫೋಟೊಗಳನ್ನು ನೋಡಿದ ಅಭಿಮಾನಿಗಳು ಅಚ್ಚರಿಗೊಂಡಿದ್ದರು.

ದೀಪಿಕಾ ದಾಸ್ ಪತಿ ದೀಪಕ್‌ ಗೌಡ ಅವರು ರಿಯಲ್​ ಎಸ್ಟೇಟ್​ ಮತ್ತು ಐಟಿ ಉದ್ಯಮಿಯಾಗಿದ್ದಾರೆ. ದೀಪಿಕಾ ದಾಸ್ ಮತ್ತು ದೀಪಕ್‌ ಪರಸ್ಪರ ಪ್ರೀತಿಸಿ ಮದುವೆಯಾದವರು.

ಇವರಿಬ್ಬರು ಆರಂಭದಲ್ಲಿ ಸ್ನೇಹಿತರಾಗಿದ್ದು, ಬಳಿಕ ಪ್ರೀತಿಸಿ ಮದುವೆಯಾಗಿದ್ದಾರೆ. ನಟಿ ದೀಪಿಕಾ ದಾಸ್​ಗೆ ಗೋವಾದಲ್ಲೇ ಮದುವೆಯಾಗುವ ಆಗೋ ಕನಸು ಇತ್ತಂತೆ.

ಹೀಗಾಗಿ ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ನಟಿ ದೀಪಿಕಾ ದಾಸ್ ಉದ್ಯಮಿ ದೀಪಕ್​ ಎಂಬುವವರ ಜೊತೆ ಮಾರ್ಚ್‌ 1ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.