
ನಟಿ ರಂಜನಿ ರಾಘವನ್
ಚಿತ್ರ: ಇನ್‌ಸ್ಟಾಗ್ರಾಂ
‘ಪುಟ್ಟ ಗೌರಿ ಮದುವೆ, ಕನ್ನಡತಿ ಧಾರಾವಾಹಿ ಮೂಲಕ ಮನೆಮಾತಾಗಿರುವ ನಟಿ ರಂಜನಿ ರಾಘವನ್ ಅವರು 2025ರ ಈ ವರ್ಷದ ಉತ್ತಮ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವ ನಟಿ ರಂಜನಿ ರಾಘವನ್ ಅವರು ಈಗ ಹೊಸ ವರ್ಷಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ನಟಿ ರಂಜನಿ ರಾಘವನ್
ನಟಿ ರಂಜನಿ ರಾಘವನ್ ಅವರು ಇನ್‌ಸ್ಟಾಗ್ರಾಂನಲ್ಲಿ ಈ ವರ್ಷದ ಉತ್ತಮ ನೆನಪುಗಳು ಎಂದು ಫೋಟೊ ಹಂಚಿಕೊಂಡಿದ್ದಾರೆ. ಒಟ್ಟು 4 ಫೋಟೋಗಳನ್ನು ಹಂಚಿಕೊಂಡ ನಟಿ ಅದರ ಜೊತೆಗೆ ‘ವರ್ಷದ ಬೆಸ್ಟ್ ಮೆಮೊರಿಗಳಲ್ಲೊಂದು ಸಿಕ್ಕಿಂ ಪ್ರವಾಸ. 15,300 ಅಡಿ ಎತ್ತರದಲ್ಲಿ ಮೋಡಗಳಲ್ಲಿ ಕಳೆದುಹೋಗಿದೆ’ ಎಂದು ಬರೆದುಕೊಂಡಿದ್ದಾರೆ.
ನಟಿ ರಂಜನಿ ರಾಘವನ್
ಪೌರಾಣಿಕ ಧಾರಾವಾಹಿ ‘ಕೆಳದಿ ಚೆನ್ನಮ್ಮ’ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದ್ದ ನಟಿ ರಂಜನಿ ರಾಘವನ್, ನಂತರ ‘ಆಕಾಶ ದೀಪ’ ಧಾರಾವಾಹಿಯಲ್ಲಿ ನಾಯಕನ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಮುಖ ಪಾತ್ರದಲ್ಲಿ ನಟಿಸಿದ್ದ ‘ಪುಟ್ಟ ಗೌರಿ ಮದುವೆ’ ಕಿರುತೆರೆಯಲ್ಲಿ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ಬಳಿಕ ‘ಕನ್ನಡತಿ’ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಯಶಸ್ಸಿ ನಟಿ ಎನಿಸಿಕೊಂಡರು. ‘ರಾಜಹಂಸ’, ‘ಕಾಂಗರೂ’ ಸೇರಿದಂತೆ ಹಲವು ಸಿನೆಮಾಗಳಲ್ಲಿಯೂ ಅವರು ನಟಿಸಿದ್ದಾರೆ.
ನಟಿ ರಂಜನಿ ರಾಘವನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.