
ನಟಿ ಸುಕೃತಾ ನಾಗ್ ಅವರು ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಕೃಪೆ: ಇನ್ಸ್ಟಾಗ್ರಾಂ
ಕನ್ನಡ ಕಿರುತೆರೆ ನಟಿ ಸುಕೃತಾ ನಾಗ್ ಅವರು ಸಿಗಂದೂರು ದೇವಾಲಯಕ್ಕೆ ಭೇಟಿ ನೀಡಿ ಚೌಡೇಶ್ವರಿ ಆಶೀರ್ವಾದ ಪಡೆದುಕೊಂಡಿದ್ದಾರೆ.
ಸಿಗಂದೂರು ಚೌಡೇಶ್ವರಿ ದೇವಸ್ಥಾನವು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ.
ದೇವಸ್ಥಾನಕ್ಕೆ ಭೇಟಿ ನೀಡಿರುವ ಚಿತ್ರಗಳನ್ನು ಸುಕೃತಾ ನಾಗ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಸುಕೃತಾ ನಾಗ್ ಅವರು ದೇವಸ್ಥಾನದ ಚಿತ್ರಗಳಿಗೆ ‘ಸಿಗಂದೂರು ಚೌಡೇಶ್ವರಿ ಅಮ್ಮನ ದರ್ಶನ ಪಡೆದಾಗ ನಿಜವಾಗಿಯೂ ಸಂತೋಷವಾಗುತ್ತದೆ. ಅದು ದೇವಾಲಯ ಮಾತ್ರವಲ್ಲ. ನನ್ನ ಮನೆ, ನೆಮ್ಮದಿಯ ತಾಣ‘ ಎಂದು ಬರೆದುಕೊಂಡಿದ್ದಾರೆ.
ಸುಕೃತಾ ಅವರು ಚೌಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದ್ದಾರೆ.
ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಪರಿಸರವನ್ನು ಸುಕೃತಾ ಅವರು ಆನಂದಿಸಿದ್ದಾರೆ.
ಸುಕೃತಾ ನಾಗ್ ಅವರು ‘ಅಗ್ನಿಸಾಕ್ಷಿ’, ‘ಭಾಗ್ಯಲಕ್ಷ್ಮೀ’, ‘ಲಕ್ಷಣ’ ಧಾರಾವಾಹಿಯಲ್ಲಿ ನಟನೆ ಮೂಲಕ ಗಮನ ಸೆಳೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.