ನಟಿ ಅದಿತಿ ಪ್ರಭುದೇವ ಹಾಗೂ ಮಗಳು ನೇಸರ
ಚಿತ್ರ: ಇನ್‌ಸ್ಟಾಗ್ರಾಮ್
ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ಮುದ್ದಾದ ಮಗಳ ಜೊತೆಗೆ ಕಾಲ ಕಳೆಯುತ್ತಿದ್ದಾರೆ.
ಅದಿತಿ ಪ್ರಭುದೇವ ಹಾಗೂ ಯಶಸ್ಸು ಚಂದ್ರಕಾಂತ್ ಅವರ ಮಗಳು ಸಖತ್ ಕ್ಯೂಟ್ ಆಗಿದ್ದಾಳೆ.
ನಟಿ ಅದಿತಿ ಪ್ರಭುದೇವ 2022ರಲ್ಲಿ ಉದ್ಯಮಿ ಯಶಸ್ಸು ಚಂದ್ರಕಾಂತ್ ಪಟ್ಲಾ ಅವರನ್ನು ವಿವಾಹವಾಗಿದ್ದರು. ಯುಗಾದಿ ಹಬ್ಬದ ದಿನದಂದು ಮಗಳು ನೇಸರ ಜನಿಸಿದ್ದಳು.
ಸದ್ಯ ಪುಟಾಣಿ ನೇಸರ ಜೊತೆಗೆ ಅದಿತಿ ಪ್ರಭುದೇವ ಫೋಟೊಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ತಾಯಿ ಮಗಳು ಇಬ್ಬರು ಬಿಳಿ ಬಣ್ಣದ ಉಡುಪನ್ನು ಧರಿಸಿ ಫೋಟೊಗೆ ಪೋಸ್ ಕೊಟ್ಟಿದ್ದಾರೆ.
ಇದೇ ಫೋಟೋವನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಪುಟಾಣಿ ನೇಸರಳ ಜೊತೆಗೆ ಅದಿತಿ ಪ್ರಭುದೇವ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಫೋಟೊಗಳ ಜೊತೆಗೆ ‘ನನ್ನ ಮಿನಿ ನಾನು, ನನ್ನ ಮ್ಯಾಜಿಕ್, ನನ್ನ ಮುದ್ದು ಎಂದು ಅಡಿಬರಹ ಬರೆದುಕೊಂಡಿದ್ದಾರೆ.
ಅಮ್ಮ ಹಾಗೂ ಮಗಳ ಫೋಟೊಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.