
ಭಾರ್ಗವಿ LL.B
ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಭಾರ್ಗವಿ LL.B ಧಾರಾವಾಹಿಯೂ ರೋಚಕ ತಿರುವಿನಲ್ಲಿದೆ. ಹೆಂಡತಿಯನ್ನು ಉಳಿಸಲು ಶ್ರೀರಾಮನಂತೆ ಅರ್ಜುನ್ ಬಂದಿದ್ದಾನೆ.
ಒಂದು ಕಡೆ ಭಾರ್ಗವಿ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾಳೆ. ಮತ್ತೊಂದು ಕಡೆ ಬೃಂದಾ ಮತ್ತು ಜೆಪಿ ನಕಲಿ ಸಂದ್ಯಾ ಎಂಬ ಗಾಳ ಬಳಸಿ ಭಾರ್ಗವಿಯನ್ನು ಜೈಲಿನಲ್ಲೇ ಇರುವಂತೆ ಮಾಡಲು ಸಿದ್ಧವಾಗಿದ್ದಾರೆ. ರವೀಂದ್ರ ತನ್ನ ಮಗಳನ್ನು ಬಿಡಿಸಲು ನಾನಾ ಪ್ರಯತ್ನ ಪಡುತ್ತಿದ್ದಾನೆ.
ಆದರೆ ಜೆಪಿ ವಿರುದ್ಧ ನಿಲ್ಲಲು ಯಾವ ಲಾಯರ್ ಕೂಡ ಸಿದ್ಧವಾಗಿಲ್ಲ. ಇಂತ ಸಂದರ್ಭದಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ತನ್ನ ಹೆಂಡತಿಯನ್ನು ಉಳಿಸಲು ಶ್ರೀರಾಮನಂತೆ ಅರ್ಜುನ್ ಕಳಚಿಟ್ಟ ಲಾ ಕೋಟ್ ಮರಳಿ ತೊಟ್ಟು ಲಾಯರ್ ಆಗಿ ಬಂದು ನಿಲ್ಲುವ ಸಂಚಿಕೆಗಳು ರೋಚಕ ತಿರುವುಗಳಿಂದ ತುಂಬಿದೆ. ಪ್ರತಿ ರಾತ್ರಿ 8:30ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಭಾರ್ಗವಿ LL.B ವೀಕ್ಷಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.