ADVERTISEMENT

BBK12: ನಿಮ್ಮಿಂದ ನಮ್ಮ ಊಟ ಹೋಯ್ತು.. ಎಂದು ಗಿಲ್ಲಿ ಜತೆ ಜಗಳಕ್ಕಿಳಿದ ಅಶ್ವಿನಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2025, 9:43 IST
Last Updated 2 ಅಕ್ಟೋಬರ್ 2025, 9:43 IST
<div class="paragraphs"><p>ಚಿತ್ರ ಕೃಪೆ:&nbsp;<strong><a href="https://www.instagram.com/colorskannadaofficial?hl=en">colorskannadaofficial</a></strong></p></div>

ಚಿತ್ರ ಕೃಪೆ: colorskannadaofficial

   

ಬಿಗ್‌ಬಾಸ್ ಸೀಸನ್ 12ರಲ್ಲಿ ಒಂಟಿ– ಜಂಟಿ ಪರಿಕಲ್ಪನೆಯಡಿಯಲ್ಲಿ ಆರಂಭಿಸಲಾಗಿದೆ. ಪ್ರಾರಂಭವಾದ ಕೆಲವೇ ದಿನಗಳಲ್ಲಿ ಸ್ಪರ್ಧಿಗಳ ನಡುವೆ ಪೈಪೋಟಿ, ಮಾತಿನ ಚಕಮಕಿ ಜೋರಾಗಿದೆ.

ಬಿಗ್‌ಬಾಸ್ ಮನೆಯಲ್ಲಿ ಒಂಟಿಯಾಗಿರುವ ಅಶ್ವಿನಿ ಅವರು ಜಂಟಿ ಗಿಲ್ಲಿ ಅವರಿಗೆ ನನ್ನ ಕಣ್ಣು ನೋಡಿ ಮಾತಾಡಿ.. ನೀನು ತುಂಬಾ ಮಾತಾಡ್ತೀಯಾ.. ನಿಮ್ಮಿಂದಾಗಿ ನಮ್ಮ ಊಟ ಕಿತ್ತುಕೊಂಡಿದ್ದಾರೆ ಎಂದು ಜೋರು ಧ್ವನಿಯಲ್ಲಿ ಗದರಿದ್ದಾರೆ. ಇದಕ್ಕೆ ಗಿಲ್ಲಿ ನಮಗೆ ಯಾವ ಪಶ್ಚಾತ್ತಾಪವು ಇಲ್ಲ, ಯಾರ ಕಣ್ಣು ನೋಡಲ್ಲ ಎಂದು ಅಶ್ವಿನಿ ಮಾತಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ADVERTISEMENT

ಮಾತಿನ ಮೂಲಕವೇ ಮಲ್ಲಮ್ಮ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದರೆ, ಇತರೆ ಸ್ಪರ್ಧಿಗಳ ಜಗಳ ಕಿರುಚಾಟ ಜೋರಾಗಿದೆ. ಇತ್ತೀಚಿನ ವರ್ಷಗಳಲ್ಲಿ ಬಿಗ್‌ಬಾಸ್ ಮನೆ ಸ್ಪರ್ಧೆ ಮನೋರಂಜನೆಗಿಂತ, ಜಗಳಕ್ಕೆ ಹೆಸರುವಾಸಿಯಾಗುತ್ತಿದೆ ಎಂದು ಪ್ರೇಕ್ಷಕರು ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.