ಇನ್‌ಸ್ಟಾಗ್ರಾಮ್ ಚಿತ್ರ
‘ಈ ಸಲ ಬಿಗ್‌ಬಾಸ್ 12ಕ್ಕೆ ನನ್ನ ಕರೆಯಲಿಲ್ಲ ಅಂದರೆ ಬಾಂಬ್ ಇಟ್ಟು ಮುಗಿಸಿ ಬಿಡ್ತೀನಿ’ ಎಂದು ಯುವಕನೊಬ್ಬ ಬೆದರಿಕೆ ಹಾಕಿದ್ದಾನೆ. ಕನ್ನಡ ಬಿಗ್‌ಬಾಸ್ 12ನೇ ಆವೃತ್ತಿ ಸೆ.28ರಿಂದ ಆರಂಭವಾಗುತ್ತಿದೆ. ನಾಳೆ ಬಿಗ್‌ಬಾಸ್ ಮನೆಗೆ ಹೋಗುವ ಸ್ಪರ್ಧಿಗಳು ಯಾರೆಂದು ಅಧಿಕೃತವಾಗಿ ತಿಳಿಯಲಿದೆ. ಆದರೆ, ಇದರ ಮಧ್ಯೆ ಯುವಕನೊಬ್ಬ ಬಿಗ್‌ಬಾಸ್‌ಗೆ ನನ್ನನ್ನು ಕರೆಯಲಿಲ್ಲ ಅಂದರೆ ಬಾಂಬ್ ಇಡುತ್ತೇನೆ ಎಂದು ವಿಡಿಯೊ ಮಾಡುವ ಮೂಲಕ ಬೆದರಿಕೆ ಹಾಕಿದ್ದಾನೆ.
ಇತ್ತೀಚೆಗೆ ದೆಹಲಿ, ಬೆಂಗಳೂರು, ಮುಂಬಯಿ ಸೇರಿದಂತೆ ಮುಂತಾದ ಕಡೆಗಳಲ್ಲಿ ಶಾಲೆಗಳು, ಹೈಕೋರ್ಟ್‌ಗಳಿಗೆ ಬಾಂಬ್ ಬೆದರಿಕೆ ಪ್ರಕರಣಗಳು ವರದಿಯಾಗಿದ್ದವು. ಆದರೆ ಈಗ ಕನ್ನಡದ ಬಿಗ್‌ಬಾಸ್‌ಗೆ ಬಾಂಬ್ ಇಡ್ತೀನಿ ಎಂದು ಯುವಕನೊಬ್ಬ ಸಾಮಾಜಿಕ ಮಾಧ್ಯಮದಲ್ಲಿ ಬೆದರಿಕೆ ಹಾಕಿದ್ದಾನೆ.
‘ಮಮ್ಮಿ ಅಶೋಕ್ 16’ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಯುವಕ ಹಂಚಿಕೊಂಡ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಈ ವಿಡಿಯೊವನ್ನು ಗಮನಿಸಿದ ಕೂಡಲೇ ಕುಂಬಳಗೋಡು ಪೊಲೀಸರು ಆರೋಪಿಯ ವಿರುದ್ಧ ಸ್ವಯಂ ಪ್ರೇರಿತವಾಗಿ ಎನ್‌ಸಿಆರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವಕ ಅಶೋಕ್‌ನನ್ನು ಕರೆದು ಪೊಲೀಸರು ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ಧಾರೆ.
ಬೆಂಗಳೂರು ನಗರ ಪೊಲೀಸರಿಂದ ಎಚ್ಚರಿಕೆ
‘ಬೆಂಗಳೂರು ನಗರ ಪೊಲೀಸರು’ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಇನ್ನು ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ‘ಬೆಂಗಳೂರಿಗರೇ ಗಮನಿಸಿ: ಆನ್‌ಲೈನ್‌ನಲ್ಲಿ ಮಾಡಿದ ಬೆದರಿಕೆಯನ್ನು ನೇರವಾಗಿ ಮಾಡಿದ ಬೆದರಿಕೆಯಂತೆಯೇ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಟೈಪ್ ಮಾಡುವ ಮೊದಲು ಯೋಚಿಸಿ ಏಕೆಂದರೆ ನಿಮ್ಮ ಪೋಸ್ಟ್‌ಗಳು ನಿಮ್ಮನ್ನು ಜೈಲಿಗೆ ಕಳುಹಿಸಬಹುದು’ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.