ಚಿತ್ರ: colorskannadaofficial
Bigg Boss Kannada 12: ಕನ್ನಡದ ಬಿಗ್‌ಬಾಸ್ 12ನೇ ಆವೃತ್ತಿ ಶುರುವಿಗೆ ಇನ್ನು ಒಂದು ದಿನ ಬಾಕಿ ಉಳಿದಿದೆ. ಸೆಪ್ಟೆಂಬರ್ 28ಕ್ಕೆ ಶುರುವಾಗುತ್ತಿರೋ ಬಿಗ್‌ಬಾಸ್ ಮನೆಗೆ ಯಾರೆಲ್ಲಾ ಸ್ಪರ್ಧಿಗಳು ಹೋಗಲಿದ್ದಾರೆ ಎಂದು ವೀಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ.
ಇದರ ಮಧ್ಯೆ ಕಲರ್ಸ್ ಕನ್ನಡ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ವಿಭಿನ್ನ ಪ್ರೋಮೊ ಒಂದನ್ನು ಹಂಚಿಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಬಿಗ್‌ಬಾಸ್ ಮನೆ ಸೇರುವ ಸಂಭಾವ್ಯರ ಪಟ್ಟಿ ಹರಿದಾಡುತ್ತಿದೆ. ಈ ನಡುವೆ ಬಿಡುಗಡೆಯಾದ ಪ್ರೋಮೊದಲ್ಲಿ ವ್ಯಕ್ತಿಯೊಬ್ಬ ಮುಖಕ್ಕೆ ಮಾಸ್ಕ್ ಹಾಕಿಕೊಂಡು ‘ನಾ ಬಿಗ್‌ಬಾಸ್‌ಗೆ ಹೋಗ್ತಾ ಇದ್ದೀನಿ’ ಎಂದು ಜನರ ಹತ್ತಿರ ಹೇಳಿದ್ದಾನೆ. ಮತ್ತೆ ವಿಡಿಯೊ ಕೊನೆಯಲ್ಲಿ ‘ಇಲ್ಲಿರುವ ಎಷ್ಟೋ ಜನಕ್ಕೆ ನಾನು ಯಾರು ಅಂತ ಗೊತ್ತೇ ಆಗಲಿಲ್ಲ. ನಿಮಗೆ ಏನಾದರೂ ಗೊತ್ತಾದರೆ ಕಾಮೆಂಟ್ ಮಾಡಿ’ ಎಂದು ಮುಸುಕುಧಾರಿ ವ್ಯಕ್ತಿ ಹೇಳಿದ್ದಾನೆ. ಇನ್ನು, ವಿಡಿಯೊದಲ್ಲಿ ಮಾಸ್ಕ್ ಹಾಕಿಕೊಂಡ ವ್ಯಕ್ತಿಗೆ ಬಂದ ಪ್ರತಿಕ್ರಿಯೆಯನ್ನು ತೊರಿಸಲಾಗಿದೆ.
ಪ್ರೋಮೊದಲ್ಲಿ ಏನಿದೆ?
ವ್ಯಕ್ತಿಯೊಬ್ಬ ಮುಖಕ್ಕೆ ಮಾಸ್ಕ್ ಹಾಕಿ, ಕಣ್ಣಿಗೆ ಕಪ್ಪು ಕನ್ನಡಕ ಧರಿಸಿ, ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಜನಗಳ ಹತ್ತಿರ ಹೋಗುತ್ತಾನೆ. ಆಗ ಗುಂಪಾಗಿ ಇರುವ ಹುಡುಗರ ಬಳಿ ಹೋದ ವ್ಯಕ್ತಿ, ನಾನು ಬಿಗ್‌ಬಾಸ್‌ಗೆ ಹೋಗ್ತಾ ಇದ್ದೀನಿ ಅಂದರೆ ನಂಬುತ್ತೀರಾ ಎಂದು ಕೇಳಿದ್ದಾನೆ. ಆಗ ಕೆಲವರು ನಾವು ನಂಬುವುದಿಲ್ಲ ಎಂದು ಹೇಳಿದರೆ, ಇನ್ನೂ ಕೆಲವರು ನೀವು ಹೋಗಿ ಸರ್ ನಾವು ನಿಮಗೆ ಬೆಂಬಲ ಕೊಡುತ್ತೇವೆ ಎಂದಿದ್ದಾರೆ. ಆದರೆ ತಂಡ ಮಾಸ್ಕ್ ಧರಿಸಿದ ವ್ಯಕ್ತಿ ಯಾರು ಎಂದು ತಿಳಿಸಿಲ್ಲ. ಸದ್ಯ ಈ ಬಾರಿಯ ಬಿಗ್‌ಬಾಸ್ ಮನೆಗೆ ಯಾರೆಲ್ಲಾ ಬರಲಿದ್ದಾರೆ ಎಂದು ಸೆ.28ರಂದು ಅಧಿಕೃತವಾಗಿ ಗೊತ್ತಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.