
ಅಶ್ವಿನಿ ಗೌಡ, ಕಿಚ್ಚ ಸುದೀಪ್
ಚಿತ್ರ: ಕಲರ್ಸ್ ಕನ್ನಡ
ವಾರದ ಪಂಚಾಯಿತಿ ನಡೆಸಲು ವೇದಿಕೆಗೆ ಕಿಚ್ಚ ಸುದೀಪ್ ಬರುತ್ತಿದ್ದಂತೆ ಗರಂ ಆಗಿದ್ದಾರೆ. ವೇದಿಕೆಗೆ ಬಂದ ಸುದೀಪ್ ಅವರು ರಕ್ಷಿತಾ ಶೆಟ್ಟಿ ಕಲಾವಿದರಿಗೆ ಚಪ್ಪಲಿ ತೋರಿಸಿದ್ದು ನಿಜಾನಾ? ಅಶ್ವಿನಿ ಗೌಡ ಮಾಡಿದ ಆರೋಪಕ್ಕೆ ತಕ್ಕ ಉತ್ತರ ಕೊಟ್ಟಿದ್ದಾರೆ.
ಕಲರ್ಸ್ ಕನ್ನಡ ಬಿಡುಗಡೆ ಮಾಡಿದ ಪ್ರೊಮೋದಲ್ಲಿ ಅಶ್ವಿನಿ ಗೌಡ, ‘ರಕ್ಷಿತಾ.. ನಾಟಕ ಅಂತ ಹೇಳಿಕೊಂಡು ನೀನು ಚಪ್ಪಲಿ ತೋರಿಸಿದ್ದೀರಾ ಎಂದರೆ ಯಾರಿಗೆ ಅವಮಾನ ಮಾಡುತ್ತಾ ಇದ್ದೀಯಾ?’ ಎಂದು ಕಿಚ್ಚ ಸುದೀಪ್ ಮುಂದೆಯೇ ಅಶ್ವಿನಿ ಗೌಡ ಆರೋಪ ಮಾಡಿದ್ದಾರೆ.
ಆಗ ಸುದೀಪ್, ಕಲಾವಿದರಿಗೆ ಚಪ್ಪಲಿ ತೋರಿಸಿದ್ರಾ? ನಾನು ತಪ್ಪು ಹೇಳಿಕೆ ಕೊಟ್ಟಾಗ ಏನಾಗುತ್ತೆ ಯಾರ್ ಯಾರೋ ಕಲಾವಿದರಿಗೆ ಹೇಳಿದ್ದರಂತೆ, ಕಲಾವಿದರಿಗೆ ಹೇಳಿದ್ದರಂತೆ ಅಂತಾರೆ. ಯಾಕೆ ಮೇಡಂ ನಾನು ಒಬ್ಬ ಕಲಾವಿದ ಅಲ್ವಾ? ಕರ್ನಾಟದಲ್ಲಿ ಇರುವ ಪ್ರತಿಯೊಬ್ಬ ಕಲಾವಿದರಿಗೆ ನಾನು ಉತ್ತರ ಕೊಡಬೇಕಾಗಿತ್ತು. ಇದೊಂದು ತಪ್ಪು ಗ್ರಹಿಕೆ ಎಂದಿದ್ದಾರೆ.
ಅಸಲಿಗೆ ಆಗಿದ್ದೇನು..?
ಕಳೆದ ಸಂಚಿಕೆಯಲ್ಲಿ ಅಶ್ವಿನಿ ಗೌಡ ಹಾಗೂ ರಕ್ಷಿತಾ ಶೆಟ್ಟಿ ಮಧ್ಯೆ ಕಿತ್ತಾಟ ನಡೆದಿತ್ತು. ಆದರೆ ಜಗಳದ ವೇಳೆ ಅಶ್ವಿನಿ ಗೌಡ ಪ್ರತಿಸ್ಪರ್ಧಿ ರಕ್ಷಿತಾ ಮೇಲೆ ಗಂಭೀರ ಆರೋಪ ಮಾಡಿದ್ದರು. ರಕ್ಷಿತಾ ಕಲಾವಿದರಿಗೆ ಅವಮಾನ ಮಾಡಿದ್ರು. ನಾಲ್ಕೈದು ಬಾರಿ ಚಪ್ಪಲಿ ತೋರಿಸಿ ಮಾತನಾಡಿದ್ರು ಎಂದೆಲ್ಲಾ ಆರೋಪಿಸಿದ್ದರು. ಇದೀಗ ಇದೇ ವಿಚಾರವಾಗಿ ಸುದೀಪ್ ಅವರು ವಾರದ ಪಂಚಾಯಿತಿಯಲ್ಲಿ ಚರ್ಚೆ ಮಾಡಿದ್ದಾರೆ. ಕಲಾವಿದರಿಗೆ ನಾನು ಉತ್ತರ ಕೊಡಬೇಕಾಗಿತ್ತು. ಇದೊಂದು ತಪ್ಪು ಗ್ರಹಿಕೆ ಎಂದು ಆರೋಪಕ್ಕೆ ತೆರೆ ಎಳೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.