ನಟ ಕಿಚ್ಚ ಸುದೀಪ್ ಮತ್ತು ಬಿಗ್‌ಬಾಸ್ ಸ್ಪರ್ಧಿಗಳು
ಕನ್ನಡದ ಬಿಗ್‌ಬಾಸ್ 12ನೇ ಆವೃತ್ತಿ ಶುರುವಾಗಿ ಇಂದಿಗೆ 14 ದಿನಗಳು ಕಳೆದಿವೆ. ಈಗ ವಾರದ ಪಂಚಾಯಿತಿ ನಡೆಸುವುದಕ್ಕೆ ಕಿಚ್ಚ ಸುದೀಪ್ ಆಗಮಿಸಿದ್ದಾರೆ. ಇಡೀ ವಾರ ಸ್ಪರ್ಧಿಗಳು ಮಾಡಿರುವ ತಪ್ಪೇನು? ಸರಿ ಏನು? ಯಾರಿಗೆ ಕಿಚ್ಚನ ಚಪ್ಪಾಳೆ ಸಿಗುತ್ತೆ? ಎಂಬೆಲ್ಲಾ ಕುತೂಹಲಕ್ಕೆ ತೆರೆ ಬಿಳಲಿದೆ.
ಇಂದು ರಾತ್ರಿ 9 ಗಂಟೆಗೆ ವಾರದ ಕತೆ ಕಿಚ್ಚನ ಜೊತೆ ಸಂಚಿಕೆ ಪ್ರಸಾರವಾಗಲಿದೆ. ಹೀಗಾಗಿ ಇಡೀ ವಾರದಲ್ಲಾದ ಘಟನೆಗಳ ಕುರಿತು ಕಿಚ್ಚ ಸುದೀಪ್ ಮಾತನಾಡಲಿದ್ದಾರೆ. ಜೊತೆಗೆ ನಾಮಿನೇಷನ್ ಹಾಟ್ ಸಿಟ್‌ನಲ್ಲಿ ಕುಳಿತುಕೊಂಡಿರುವ ಸ್ಪರ್ಧಿಗಳನ್ನು ಸೇಫ್ ಮಾಡಲಿದ್ದಾರೆ. ಕಲರ್ಸ್ ಕನ್ನಡ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಪ್ರೊಮೋದಲ್ಲಿ ಬಿಗ್‌ಬಾಸ್ ವೇದಿಕೆಗೆ ಕಿಚ್ಚ ಸುದೀಪ್ ಆಗಮನವಾಗಿದೆ.
ಈ ವಾರ ನಾಮಿನೇಟ್ ಆಗಿರುವ ಸರ್ಧಿಗಳು ಯಾರು?
ಜಂಟಿಗಳಾದ ಮಂಜು ಭಾಷಿಣಿ–ರಾಶಿಕಾ, ಮಾಳು ನಿಪನಾಳ–ಸ್ಪಂದನಾ, ಅಭಿಷೇಕ್– ಅಶ್ವಿನಿ ಎಸ್.ಎನ್. ಒಂಟಿಗಳಾದ ಜಾಹ್ನವಿ, ಧನುಷ್, ಅಶ್ವಿನಿ ಗೌಡ ಹಾಗೂ ರಕ್ಷಿತಾ ಶೆಟ್ಟಿ ಒಟ್ಟು 10 ಸ್ಪರ್ಧಿಗಳು ಈ ವಾರ ಬಿಗ್‌ಬಾಸ್ ಮನೆಯಿಂದ ಆಚೆ ಹೋಗಲು ನಾಮಿನೇಟ್ ಆಗಿದ್ದಾರೆ. ಈ 10 ಮಂದಿಯಲ್ಲಿ ಇಂದು ಕಿಚ್ಚ ಸುದೀಪ್ ಯಾರನ್ನು ಸೇಫ್ ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.