ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿ
ಚಿತ್ರ: ಇನ್‌ಸ್ಟಾಗ್ರಾಂ
ಕನ್ನಡದ ಬಿಗ್‌ಬಾಸ್ ಸೀಸನ್ 12ರಲ್ಲಿ ಸದ್ಯ 10 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ ಮೇಲೆ ಕಾಣಿಸುತ್ತಿರುವ ಚಿತ್ರದಲ್ಲಿ ಬಾಲಕನೊಬ್ಬ ನಿಂತುಕೊಂಡಿದ್ದಾನೆ. ಈಗ ಇವರು ಬಿಗ್‌ಬಾಸ್ ಮನೆಯ ಆಕರ್ಷಕ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ಈತ ಬಿಗ್‌ಬಾಸ್ ಮನೆಗೆ ಬಂದಾಗ ಸ್ಪರ್ಧಿಗಳಷ್ಟೇ ಅಲ್ಲ, ವೀಕ್ಷಕರು ಕೂಡ ಫಿದಾ ಆಗಿದ್ದರು.
ಸೂರಜ್ ಸಿಂಗ್
ಇವರ ಲುಕ್, ದೇಹದಾರ್ಢ್ಯಕ್ಕೆ ಮನಸೋತ ಯುವತಿಯರು ಇವರನ್ನು ಫಾಲೋ ಮಾಡಲು ಆರಂಭಿಸಿದ್ದರು. ಮೇಲೆ ಕಾಣಿಸುತ್ತಿರುವ ಫೋಟೋದಲ್ಲಿರುವ ಬಾಲಕ ಬೇರೆ ಯಾರು ಅಲ್ಲ. ಅವರೇ ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿರುವ ಸೂರಜ್ ಸಿಂಗ್.
ಸೂರಜ್ ಸಿಂಗ್
ಬಿಗ್‌ಬಾಸ್ ಸೀಸನ್ 12ಕ್ಕೆ ಸೂರಜ್ ಸಿಂಗ್ ಅವರು ವೈರ್ಡ್ ಕಾರ್ಡ್ ಸ್ಪರ್ಧಿಯಾಗಿ ಆಗಮಿಸಿದ್ದರು. ಇವರು ಬಿಗ್ ಬಾಸ್ ಮನೆಗೆ ಬಂದಾಗ ಈಜುಕೊಳದಲ್ಲಿ ನಿಲ್ಲಿಸಿ, ಅವರ ಸುತ್ತ ಗುಲಾಬಿಯ ದಳಗಳನ್ನು ಹಾಕಿ ವಿಶೇಷವಾಗಿ ಬರಮಾಡಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದ ಪ್ರೊಮೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಹರಿದಾಡಿತ್ತು.
ಇನ್ನು, ಸೂರಜ್ ಸಿಂಗ್ ಕೂಡ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅವರು ಫಿಟ್‌ನೆಸ್, ಬಾಡಿ ಬಿಲ್ಡಿಂಗ್, ಜಿಮ್‌ನಲ್ಲಿ ವರ್ಕೌಟ್, ಉತ್ತಮ ಔಟ್‌ಫಿಟ್‌ನಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಸೂರಜ್ ಸಿಂಗ್ ಅವರು 2.60 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.