ADVERTISEMENT

BBK12|ಧ್ರುವಂತ್‌ ವಿರುದ್ಧ ತಿರುಗಿಬಿದ್ದ ರಾಶಿಕಾ–ಕಾವ್ಯ: ಮಾತೇ ಮುಳ್ಳಾಗುತ್ತಾ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ನವೆಂಬರ್ 2025, 11:29 IST
Last Updated 10 ನವೆಂಬರ್ 2025, 11:29 IST
<div class="paragraphs"><p>ಧ್ರುವಂತ್‌,&nbsp;ರಾಶಿಕಾ, ಕಾವ್ಯ</p></div>

ಧ್ರುವಂತ್‌, ರಾಶಿಕಾ, ಕಾವ್ಯ

   

ಚಿತ್ರ: ಇನ್‌ಸ್ಟಾಗ್ರಾಮ್

ಬಿಗ್‌ಬಾಸ್‌ ಮನೆಯಲ್ಲಿ ಯಾರು ಏನೇ ಮಾತನಾಡಿದರೂ ಬೇಗನೆ ಗೊತ್ತಾಗಿಬಿಡುತ್ತದೆ. ಧ್ರುವಂತ್‌ ಅವರಿಗೆ ತಮ್ಮ ಮಾತೇ ಮುಳ್ಳಾಗಿದೆ. ಕಲರ್ಸ್ ಕನ್ನಡ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಧ್ರುವಂತ್ ಆಡಿದ ಅದೊಂದು ಮಾತಿಗೆ ರಾಶಿಕಾ ಹಾಗೂ ಕಾವ್ಯ ಸಿಡಿದಿದ್ದಾರೆ.

ADVERTISEMENT

ಪ್ರೊಮ್ರೋದಲ್ಲಿ ಏನಿದೆ?

ಧ್ರುವಂತ್ ಈ ಹಿಂದೆ ರಾಶಿಕಾ ಬಗ್ಗೆ ನೀಡಿದ್ದ ಹೇಳಿಕೆಯನ್ನು ಕಾವ್ಯ ಅವರು ರಾಶಿಕಾಗೆ ಹೇಳಿದ್ದಾರೆ. ಅದರಲ್ಲಿ ಧ್ರುವಂತ್‌ ಹತ್ತಿರ ರಾಶಿಕಾ ‘ನೀವು ಕಾವ್ಯ ಹತ್ತಿರ ಹೋಗಿ ನನ್ನ ಬಗ್ಗೆ ಹೇಳಿದಿರಲ್ಲಾ ಅದು ನಿಮ್ಮ ವ್ಯಕ್ತಿತ್ವ ತೋರಿಸುತ್ತದೆ’ ಎಂದು ಕೂಗಾಡಿದ್ದಾರೆ. ಆಗ ಮಾತನಾಡಿದ ಕ್ಯಾವ, ರಾಶಿ ಅವರು ಅಭಿಷೇಕ್ ಹತ್ತಿರ ಹೋದರು ವರ್ಕ್ ಆಗಿಲ್ಲ, ನನ್ನ ಹತ್ತಿರ ಬಂದರು ವರ್ಕ್ ಆಗಿಲ್ಲ. ಈಗ ಸೂರಜ್‌ ಹತ್ತಿರ ಮಾತನಾಡಿಕೊಂಡಿದ್ದಾರೆ ಅಂತ ಎಲ್ಲರ ಸಮ್ಮುಖದಲ್ಲೇ ಹೇಳಿದ್ದಾರೆ.

ಆಗ ಧ್ರುವಂತ್ ನನಗೆ ಹೆಣ್ಣು ಮಕ್ಕಳ ಜೊತೆಗೆ ಮಾತನಾಡಲು ಇಷ್ಟ ಇಲ್ಲ ಅಂತಾರೆ. ಆಗ ಸಿಡಿದೆದ್ದ ಕಾವ್ಯ ‘ಹೆಣ್ಣು ಮಕ್ಕಳಿಗೆ ನಿಮ್ಮ ಹತ್ತಿರ ಮಾತನಾಡೋದಕ್ಕೆ ಇಷ್ಟ ಇಲ್ಲ’ ಎಂದು ಖಾರವಾಗಿ ಉತ್ತರಿಸಿದ್ದಾರೆ. ಸದ್ಯ, ಬಿಗ್‌ಬಾಸ್ ಮನೆಯಲ್ಲಿ ಧ್ರುವಂತ್‌ಗೆ ತಾವು ಆಡಿದ ಮಾತೇ ಅವರಿಗೆ ಮುಳುವಾಗಿ ಬಿಟ್ಟಿದೆ. ಇನ್ನು ಇಂದು ರಾತ್ರಿ 9.30ಕ್ಕೆ ಪ್ರಸಾರವಾಗುವ ಸಂಚಿಕೆಯಲ್ಲಿ ಮುಂದೆ ಏನೆಲ್ಲಾ ಆಯ್ತು ಎಂಬುದರ ಬಗ್ಗೆ ಗೊತ್ತಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.