ADVERTISEMENT

ಅರ್ಹ ಸ್ಪರ್ಧಿಯನ್ನು ಬೆಂಬಲಿಸಿ:ಬಿಗ್‌ಬಾಸ್ ಮಾಜಿ ಸ್ಪರ್ಧಿ ದೀಪಿಕಾ ಹೀಗ್ಯಾಕಂದ್ರು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜನವರಿ 2026, 14:32 IST
Last Updated 18 ಜನವರಿ 2026, 14:32 IST
<div class="paragraphs"><p>ನಟಿ ದೀಪಿಕಾ ದಾಸ್</p></div>

ನಟಿ ದೀಪಿಕಾ ದಾಸ್

   

ಚಿತ್ರ: ಇನ್‌ಸ್ಟಾಗ್ರಾಂ

ಕನ್ನಡದ ನಟಿ, ಬಿಗ್‌ಬಾಸ್‌ ಮಾಜಿ ಸ್ಪರ್ಧಿ ದೀಪಿಕಾ ದಾಸ್‌ ಅವರು ‘ದಯವಿಟ್ಟು ಪ್ರಾಮಾಣಿಕರಾಗಿರಿ, ಅರ್ಹ ಸ್ಪರ್ಧಿಯನ್ನು ಬೆಂಬಲಿಸಿ. ಅರ್ಹ ಸ್ಪರ್ಧಿಯು ಈ ಶೋ ಗೆಲ್ಲಲಿ’ ಎಂದು ಹೇಳಿದ್ದಾರೆ.

ADVERTISEMENT

ಸಾಮಾಜಿಕ ವೇದಿಕೆ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹೀಗೆ ಬರೆದುಕೊಂಡಿದ್ದಾರೆ. ‘ಬಿಗ್ ಬಾಸ್ ಸೀಸನ್ 12.. ಈ ವರ್ಷ ನಡೆಯುತ್ತಿರುವ ಕ್ರೇಜ್ ನೋಡಿ ನಾನು ನಿಜಕ್ಕೂ ಖುಷಿ ಪಟ್ಟಿದ್ದೇನೆ. ಅಲ್ಲದೆ, ಅದನ್ನು ತುಂಬಾ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಿರುವ ಹಾಗೂ ರಾಜಕೀಯ ಮತ್ತು ಪ್ರಚಾರದ ವಿಷಯದಲ್ಲಿ ವೈಯಕ್ತಿಕ ಲಾಭಗಳನ್ನು ಬಳಸಿಕೊಳ್ಳುತ್ತಿರುವವರ ಬಗ್ಗೆ ನನಗೆ ತುಂಬಾ ನಿರಾಶೆಯಾಗಿದೆ. ದಯವಿಟ್ಟು ಪ್ರಾಮಾಣಿಕರಾಗಿರಿ, ಅರ್ಹ ಸ್ಪರ್ಧಿಯನ್ನು ಬೆಂಬಲಿಸಿ. ಅರ್ಹ ಸ್ಪರ್ಧಿಯು ಈ ಶೋ ಗೆಲ್ಲಲಿ. ಎಲ್ಲಾ ಫೈನಲಿಸ್ಟ್‌ಗಳಿಗೆ ಶುಭಹಾರೈಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ನಟಿ ದೀಪಿಕಾ ದಾಸ್ ಇನ್‌ಸ್ಟಾಗ್ರಾಂ ಪೋಸ್ಟ್

ಈ ಬಾರಿಯ ಬಿಗ್‌ಬಾಸ್‌ ಸೀಸನ್ 12 ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಚುನಾವಣೆಯಲ್ಲಿ ಮತ ಪ್ರಚಾರ ಮಾಡಿದ ಹಾಗೇ, ಬಿಗ್‌ಬಾಸ್‌ ಸ್ಪರ್ಧಿಗಳ ಪರ ಅಭಿಮಾನಿಗಳು ಅಬ್ಬರದ ಪ್ರಚಾರ ಮಾಡಿದ್ದಾರೆ. ಹೀಗಾಗಿ ಈ ಬಾರಿಯ ಬಿಗ್‌ಬಾಸ್‌ ವಿನ್ನರ್‌ ಯಾರಾಗಲಿದ್ದಾರೆ ಎಂಬ ಕುತೂಹಲ ಮನೆಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.