
ಗಾಯಕ ಮಾಳು ನಿಪನಾಳ
ಚಿತ್ರ: ಇನ್‌ಸ್ಟಾಗ್ರಾಂ
ಕನ್ನಡದ ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿ, ಜನಪ್ರಿಯ ಜಾನಪದ ಗಾಯಕ ಮತ್ತು ಗೀತರಚನೆಕಾರ ಮಾಳು ನಿಪನಾಳ ಅವರು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಹೊಸ ವೇಷದಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಮಾಳು ನಿಪನಾಳ ಅವರು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹೊಸ ಹಾಡಿನ ಬಗ್ಗೆ ಅಪ್‌ಡೇಟ್ ಒಂದನ್ನು ಕೊಟ್ಟಿದ್ದಾರೆ. ಅದರ ಜೊತೆಗೆ ‘ಫೆಬ್ರುವರಿ 27ರಂದು ಸಂಜೆ 5 ಗಂಟೆಗೆ ನಿಮ್ಮೆಲ್ಲರ ಮುಂದೆ ಒಂದು ಹೊಸ ಪ್ರಯತ್ನದಲ್ಲಿ’ ಎಂದು ಬರೆದಿಕೊಂಡಿದ್ದಾರೆ.
ತಮ್ಮ ವಿಶಿಷ್ಟ ಶೈಲಿಯ ಉತ್ತರ ಕರ್ನಾಟಕದ ಜಾನಪದ ಹಾಡುಗಳಿಗೆ ಹೆಸರುವಾಸಿಯಾಗಿದರುವ ಮಾಳು ನಿಪನಾಳ ಅವರು ಹೊಸ ಆಲ್ಬಮ್ ಹಾಡಿನಲ್ಲಿ ನಟಿಸಿದ್ದಾರೆ. ‘ಕುಣಿಯುವೆ’ ಆಲ್ಬಾಮ್ ಹಾಡು ಫೆ.27ರಂದು ಬಿಡುಗಡೆಯಾಗಲಿದೆ. ಈ ಬಗ್ಗೆ ಮಾಳು ಅವರೇ ಮಾಹಿತಿ ನೀಡಿದ್ದಾರೆ.
ಗಾಯಕ ಮಾಳು ನಿಪನಾಳ ಅವರು ಇತ್ತೀಚೆಗೆ ಮುಕ್ತಾಯಗೊಂಡ ಬಿಗ್‌ಬಾಸ್ ಸೀಸನ್ 12ಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಬಿಗ್‌ಬಾಸ್ ಮನೆಯಲ್ಲಿ ತಮ್ಮ ಜಾನಪದ ಹಾಡುಗಳನ್ನು ಹಾಡುತ್ತಾ ಎಲ್ಲರ ಗಮನ ಸೆಳೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.