ADVERTISEMENT

BBK12: ಫಿನಾಲೆ ಹೊತ್ತಲ್ಲೇ 5 ಮಂದಿ ನಾಮಿನೇಟ್; ಬಿಗ್‌ಬಾಸ್‌ನಿಂದ ಯಾರು ಹೊರಕ್ಕೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜನವರಿ 2026, 6:06 IST
Last Updated 3 ಜನವರಿ 2026, 6:06 IST
<div class="paragraphs"><p>ಅಶ್ವಿನಿ ಗೌಡ, ಧನುಷ್‌,&nbsp;ಸ್ಪಂದನಾ ಸೋಮಣ್ಣ,&nbsp;ಧ್ರುವಂತ್,ರಾಶಿಕಾ ಶೆಟ್ಟಿ</p></div>

ಅಶ್ವಿನಿ ಗೌಡ, ಧನುಷ್‌, ಸ್ಪಂದನಾ ಸೋಮಣ್ಣ, ಧ್ರುವಂತ್,ರಾಶಿಕಾ ಶೆಟ್ಟಿ

   

ಚಿತ್ರ: ಇನ್‌ಸ್ಟಾಗ್ರಾಂ

ಕನ್ನಡದ ಬಿಗ್‌ಬಾಸ್‌ ಸೀಸನ್ 12 ಫಿನಾಲೆ ವಾರಕ್ಕೆ ಹತ್ತಿರವಾಗುತ್ತಿದೆ. ಇದೇ ಸಂದರ್ಭದಲ್ಲಿ ಬಿಗ್‌ಬಾಸ್‌ ಮನೆಯಿಂದ ಆಚೆ ಹೋಗಲು 5 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಐದು ಸ್ಪರ್ಧಿಗಳ ಪೈಕಿ ಈ ವಾರ ಬಿಗ್‌ಬಾಸ್‌ ಮನೆಗೆ ವಿದಾಯ ಹೇಳುವವರು ಯಾರೆಂದು ಭಾನುವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಹೇಳಲಿದ್ದಾರೆ.

ADVERTISEMENT

ಕಳೆದ ವಾರ ಬಿಗ್‌ಬಾಸ್‌ ಮನೆಯಿಂದ ಮಾಳು ನಿಪನಾಳ್‌ ಮತ್ತು ಸೂರಜ್‌ ಸಿಂಗ್‌ ಅವರು ಮನೆಯಿಂದ ಆಚೆ ಹೋಗಿದ್ದರು. ಅಂತೆಯೇ ಈ ವಾರ ನಾಮಿನೇಷನ್‌ ಪಟ್ಟಿಯಲ್ಲಿರುವ 5 ಸ್ಪರ್ಧಿಗಳಿಗೆ ಭಯ ಶುರುವಾಗಿದೆ.

ನಾಮಿನೇಟ್‌ ಆಗಿರುವ ಸ್ಪರ್ಧಿಗಳು

ಈ ವಾರ ಮನೆಯ ಕ್ಯಾಪ್ಟನ್‌ ಆಗಿದ್ದ ಗಿಲ್ಲಿ ಅವರ ನೇತೃತ್ವದಲ್ಲಿ ನಾಮಿನೇಷನ್‌ ಪ್ರಕ್ರಿಯೆ ನಡೆದಿತ್ತು. ಆಗ ಸ್ಪಂದನಾ ಸೋಮಣ್ಣ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಧ್ರುವಂತ್, ಧನುಷ್‌ ಸೇರಿ ಒಟ್ಟು ಮಂದಿ ನಾಮಿನೇಟ್‌ ಆಗಿದ್ದಾರೆ. ಉಳಿದಂತೆ ಈ ವಾರ ಗಿಲ್ಲಿ ನಟ, ಕಾವ್ಯ, ರಕ್ಷಿತಾ, ರಘು ನಾಮಿನೇಷನ್‌ನಿಂದ ಸೇಫ್ ಆಗಿದ್ದಾರೆ. ಇನ್ನು, ಬಿಗ್‌ಬಾಸ್‌ ಫಿನಾಲೆಗೆ ಕೆಲವು ವಾರಗಳಷ್ಟೇ ಬಾಕಿ ಉಳಿದಿವೆ. ಹೀಗಾಗಿ ಈ ಬಾರಿಯ ಬಿಗ್‌ಬಾಸ್‌ ಸೀಸನ್ 12ರ ವಿಜೇತ ಯಾರಾಗಲಿದ್ದಾರೆ ಎಂದು ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.